Publish Date: Sun, 26 Dec 2021 (10:33 IST)
Updated Date: Sun, 26 Dec 2021 (10:35 IST)
ಸೆಂಚೂರಿಯನ್: ಭಾರತ ಮತ್ತು ದ.ಆಫ್ರಿಕಾ ನಡುವೆ ಇಂದಿನಿಂದ ಮೊದಲ ಟೆಸ್ಟ್ ಪಂದ್ಯ ನಡೆಯಲಿದ್ದು, ಭಾರತದ ಪ್ಲೇಯಿಂಗ್ ಇಲೆವೆನ್ ಬಗ್ಗೆ ಎಲ್ಲರಲ್ಲಿ ಕುತೂಹಲವಿದೆ.
ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಮಯಾಂಕ್ ಅಗರ್ವಾಲ್ ಜೊತೆಗೆ ಇನಿಂಗ್ಸ್ ಆರಂಭಿಸಲು ಪೈಪೋಟಿಯಿದೆ. ಅನುಭವಿ ಕೆಎಲ್ ರಾಹುಲ್ ರನ್ನೇ ಕಣಕ್ಕಿಳಿಸಲಾಗುತ್ತದೆಯೇ ಅಥವಾ ಚೇತೇಶ್ವರ ಪೂಜಾರಗೆ ಬಡ್ತಿ ನೀಡಬಹುದೇ ಎಂಬ ಅನುಮಾನಗಳಿವೆ.
ಪೂಜಾರ ಸ್ಥಾನ ಪಡೆದರೆ ಅಜಿಂಕ್ಯಾ ರೆಹಾನೆಗೂ ಒಂದು ಅವಕಾಶ ನೀಡುವ ಸಾಧ‍್ಯತೆಯಿದೆ. ಬೌಲಿಂಗ್ ವಿಭಾಗದಲ್ಲಿ ರವಿಚಂದ್ರನ್ ಅಶ್ವಿನ್ ಸ್ಥಾನ ಭದ್ರವಾಗಿರಲಿದೆ. ಮೂವರು ವೇಗಿಗಳೊಂದಿಗೆ ಕಣಕ್ಕಿಳಿದರೆ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾಗೆ ಅವಕಾಶ ಸಿಗಬಹುದು.