Select Your Language

Notifications

webdunia
webdunia
webdunia
webdunia

ಕೊಹ್ಲಿ-ಗಂಗೂಲಿ ವಿವಾದದ ಬಗ್ಗೆ ಮಾತಾಡಕ್ಕೆ ಇದು ಸಮಯವಲ್ಲ: ದ್ರಾವಿಡ್ ಖಡಕ್ ಮಾತು

ಕೊಹ್ಲಿ-ಗಂಗೂಲಿ ವಿವಾದದ ಬಗ್ಗೆ ಮಾತಾಡಕ್ಕೆ ಇದು ಸಮಯವಲ್ಲ: ದ್ರಾವಿಡ್ ಖಡಕ್ ಮಾತು
ಸೆಂಚೂರಿಯನ್ , ಭಾನುವಾರ, 26 ಡಿಸೆಂಬರ್ 2021 (09:45 IST)
ಸೆಂಚೂರಿಯನ್: ವಿರಾಟ್ ಕೊಹ್ಲಿ-ಸೌರವ್ ಗಂಗೂಲಿ ನಡುವೆ ನಾಯಕತ್ವಕ್ಕೆ ಸಂಬಂಧಿಸಿದಂತೆ ವಿವಾದದ ಕುರಿತಾಗಿ ಯಾವುದೇ ಹೇಳಿಕೆ ನೀಡಲು ಕೋಚ್ ರಾಹುಲ್ ದ್ರಾವಿಡ್ ನಿರಾಕರಿಸಿದ್ದಾರೆ.

ನಿನ್ನೆ ಮಾಧ್ಯಮಗೋಷ್ಠಿಯಲ್ಲಿ ಕೊಹ್ಲಿ-ಗಂಗೂಲಿ ನಡುವಿನ ವಿವಾದದ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ದ್ರಾವಿಡ್‍ ಗೆ ಪ್ರಶ್ನೆ ಕೇಳಲಾಯಿತು.

ಇದಕ್ಕೆ ಪ್ರತಿಕ್ರಿಯಿಸಿದ ದ್ರಾವಿಡ್, ‘ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಈ ವಿಚಾರ ಚರ್ಚಿಸಲು ಇದು ವೇದಿಕೆಯೂ ಅಲ್ಲ, ಸಮಯವೂ ಅಲ್ಲ. ಆಂತರಿಕವಾಗಿ ನಡೆದ ಚರ್ಚೆಗಳನ್ನು ನಾನು ಮಾಧ್ಯಮಗಳ ಮುಂದೆ ಬಹಿರಂಗಗೊಳಿಸಲ್ಲ. ವೈಟ್ ಬಾಲ್ ಗೆ ಯಾರು ನಾಯಕನಾಗಬೇಕು ಎಂಬುದು ಸಂಪೂರ್ಣವಾಗಿ ಆಯ್ಕೆಗಾರರಿಗೆ ಬಿಟ್ಟ ವಿಷಯ’ ಎಂದು ದ್ರಾವಿಡ್ ಖಡಕ್ ಆಗಿ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ದ.ಆಫ್ರಿಕಾ ಕ್ರಿಕೆಟ್ ಸರಣಿ ಇಂದಿನಿಂದ ಶುರು