Publish Date: Tue, 17 Jan 2023 (08:20 IST)
Updated Date: Tue, 17 Jan 2023 (08:39 IST)
ಮುಂಬೈ: ಈಗಷ್ಟೇ ಶ್ರೀಲಂಕಾ ವಿರುದ್ಧ ಏಕದಿನ ಸರಣಿ ಕ್ಲೀನ್ ಸ್ವೀಪ್ ಮಾಡಿಕೊಂಡ ಟೀಂ ಇಂಡಿಯಾ ಮತ್ತೊಂದು ಸರಣಿಗೆ ಸಜ್ಜಾಗಿದೆ.
ಇದೇ ವರ್ಷ ಏಕದಿನ ವಿಶ್ವಕಪ್ ನಡೆಯಲಿರುವುದರಿಂದ ಭಾರತ ಈ ವರ್ಷ ಹೆಚ್ಚು ಹೆಚ್ಚು ಏಕದಿನ ಸರಣಿ ಆಡಲಿದೆ. ಇದೀಗ ನಾಳೆಯಿಂದ ಮತ್ತೊಂದು ಏಕದಿನ ಸರಣಿ ಆರಂಭವಾಗುತ್ತಿದೆ.
ನಾಳೆಯಿಂದ ನ್ಯೂಜಿಲೆಂಡ್ ವಿರುದ್ಧ ಏಕದಿನ ಸರಣಿ ಆರಂಭವಾಗಲಿದೆ. ಇದೂ ಮೂರು ಪಂದ್ಯಗಳ ಏಕದಿನ ಸರಣಿಯಾಗಿದ್ದು, ಮೊದಲ ಪಂದ್ಯ ಹೈದರಾಬಾದ್ ನಲ್ಲಿ ಜನವರಿ 18 ರಂದು, ಎರಡನೇ ಪಂದ್ಯ 21 ರಂದು ರಾಯ್ಪುರದಲ್ಲಿ ಮತ್ತು ಮೂರನೇ ಪಂದ್ಯ ಇಂದೋರ್ ನಲ್ಲಿ 24 ರಂದು ನಡೆಯಲಿದೆ. ಇದಾದ ಬಳಿಕ ಜನವರಿ 27 ರಿಂದ ಟಿ20 ಸರಣಿ ಆರಂಭವಾಗಲಿದೆ.