Select Your Language

Notifications

webdunia
webdunia
webdunia
webdunia

ಜನವರಿ 15 ಕೊಹ್ಲಿ ಪಾಲಿಗೆ ಲಕ್ಕಿ ಡೇ: ಈ ದಿನ ಎಷ್ಟು ಬಾರಿ ಶತಕ ಗಳಿಸಿದ್ದಾರೆ ಗೊತ್ತಾ?

webdunia
ತಿರುವನಂತಪುರಂ , ಸೋಮವಾರ, 16 ಜನವರಿ 2023 (08:40 IST)
Photo Courtesy: Twitter
ತಿರುವನಂತಪುರಂ: ಟೀಂ ಇಂಡಿಯಾ ರನ್ ಮೆಷಿನ್ ವಿರಾಟ್ ಕೊಹ್ಲಿಗೆ ಜನವರಿ 15 ಎಂದರೆ ಅದೃಷ್ಟದ ದಿನ. ಈ ದಿನ ಅವರು ಎಷ್ಟು ಬಾರಿ ಶತಕ ಗಳಿಸಿದ್ದಾರೆ ಗೊತ್ತಾ?

ಶ್ರೀಲಂಕಾ ವಿರುದ್ಧ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಕೊಹ್ಲಿ ಭರ್ಜರಿ 166 ರನ್ ಗಳಿಸಿದ್ದಾರೆ. ನಿನ್ನೆ ಜನವರಿ 15 ಆಗಿತ್ತು. ಈ ದಿನ ಹಿಂದೆಯೂ ಅವರು ಮೂರು ಬಾರಿ ಶತಕ ಗಳಿಸಿದ್ದಾರೆ.

2017, 2018 ಮತ್ತು 2019 ರಲ್ಲಿ ಸತತವಾಗಿ ಅವರು ಜನವರಿ 15 ರಂದೇ ಶತಕ ಗಳಿಸಿದ್ದರು. ಇದೀಗ ಮತ್ತೆ 2023 ರಲ್ಲಿ ಜನವರಿ 15 ರಂದು 166 ರನ್ ಗಳಿಸಿದ್ದಾರೆ. 2017 ರಲ್ಲಿ ಇಂಗ್ಲೆಂಡ್ ವಿರುದ್ಧ ಏಕದಿನ ಪಂದ್ಯದಲ್ಲಿ 2017 ರನ್, 2018 ರಲ್ಲಿ ದ.ಆಫ್ರಿಕಾ ವಿರುದ್ಧ ಟೆಸ್ಟ್ ಪಂದ್ಯದಲ್ಲಿ 153 ರನ್ ಮತ್ತು 2019 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಏಕದಿನ ಪಂದ್ಯದಲ್ಲಿ 104 ರನ್ ಸಿಡಿಸಿದ್ದರು. ಹೀಗಾಗಿ ಮತ್ತೊಮ್ಮೆ ಜನವರಿ 15 ತಮ್ಮ ಶತಕದ ದಿನ ಎಂದು ಕೊಹ್ಲಿ ಸಾಬೀತುಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಏಕದಿನ ಇತಿಹಾಸದಲ್ಲೇ ಅತೀ ದೊಡ್ಡ ಗೆಲುವು: ಟೀಂ ಇಂಡಿಯಾ ಮಾಡಿದ ದಾಖಲೆಗಳ ಪಟ್ಟಿ ಇಲ್ಲಿದೆ