ಸಿಡ್ನಿ: ಟಿ20 ವಿಶ್ವಕಪ್ ನ ಎರಡನೇ ಪಂದ್ಯವಾಡಲು ಸಿಡ್ನಿಗೆ ಬಂದಿಳಿದಿರುವ ಟೀಂ ಇಂಡಿಯಾ ಕ್ರಿಕೆಟಿಗರು ಊಟಕ್ಕಾಗಿ ಪರದಾಡುವಂತಾಗಿದೆ.
ಇದು ಐಸಿಸಿ ಆಯೋಜಿಸಿರುವ ಕೂಟವಾಗಿರುವುದರಿಂದ ಊಟೋಪಚಾರದ ವ್ಯವಸ್ಥೆಯನ್ನೂ ಐಸಿಸಿಯೇ ನೋಡಿಕೊಳ್ಳುತ್ತಿದೆ. ಸಿಡ್ನಿಯಲ್ಲಿ ನಿನ್ನೆ ನೆಟ್ ಸೆಷನ್ ಮುಗಿದ ಬಳಿಕ ಊಟ ಮಾಡಲು ಹೊರಟಿದ್ದ ಕ್ರಿಕೆಟಿಗರಿಗೆ ಸ್ಯಾಂಡ್ ವಿಚ್, ಹಣ್ಣು ಹಂಪಲುಗಳನ್ನು ನೋಡಿ ಬೇಸರವಾಗಿದೆ.
ಬಳಿಕ ಅದನ್ನು ಸೇವಿಸದೇ ನೇರವಾಗಿ ಹೋಟೆಲ್ ರೂಂಗೆ ತೆರಳಿ ತಾವೇ ಆಹಾರ ಖರೀದಿಸಿ ಸೇವಿಸಿದ್ದಾರೆ. ಭಾರತೀಯ ಆಹಾರ ಪದ್ಧತಿ ಊಟವಿಲ್ಲದೇ ಕ್ರಿಕೆಟಿಗರು ಪರದಾಡುವಂತಾಗಿದೆ.
-Edited by Rajesh Patil