Publish Date: Tue, 25 Oct 2022 (16:53 IST)
Updated Date: Tue, 25 Oct 2022 (16:55 IST)
ಸಿಡ್ನಿ: ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ರೋಚಕ ಗೆಲುವು ಕಾಣಲು ಆರ್ ಅಶ್ವಿನ್ ಬುದ್ಧಿವಂತಿಕೆಯ ಆಟವೂ ಕಾರಣ.
ಕೊನೆಯ ಓವರ್ ನಲ್ಲಿ ಬ್ಯಾಟಿಂಗ್ ಗೆ ಬಂದ ದಿನೇಶ್ ಕಾರ್ತಿಕ್ ದೊಡ್ಡ ಹೊಡೆತಕ್ಕೆ ಕೈ ಹಾಕಲು ಹೋಗಿ ನಿರ್ಣಾಯಕ ಹಂತದಲ್ಲಿ ಔಟಾದರು. ಇನ್ನೇನು ಎರಡು ಎಸೆತ ಬಾಕಿಯಿರುವಾಗ ಅಶ್ವಿನ್ ಕ್ರೀಸ್ ಗೆ ಬಂದಿದ್ದರು. ಲೆಗ್ ಸೈಡ್ ಗೆ ಬಂದ ಬಾಲ್ ನ್ನು ಬುದ್ಧಿವಂತಿಕೆಯಿಂದ ಕೀಪರ್ ಕೈ ಸೇರುವಂತೆ ಮಾಡಿದ ಅಶ್ವಿನ್ ಆ ಎಸೆತ ವೈಡ್ ಆಗುವಂತೆ ಮಾಡಿದರು. ಕೊನೆಯ ಎಸೆತದಲ್ಲಿ ಸಿಂಗಲ್ಸ್ ಪಡೆದು ತಂಡದ ಗೆಲುವಿಗೆ ಕಾರಣರಾದರು.
ಒಂದು ವೇಳೆ ಅಶ್ವಿನ್ ಗೆಲುವಿನ ರನ್ ಗಳಿಸಲು ಸಾಧ‍್ಯವಾಗದೇ ಹೋಗಿದ್ದರೆ ಆ ಅಪವಾದ ದಿನೇಶ್ ಕಾರ್ತಿಕ್ ಮೇಲೆ ಬರುತ್ತಿತ್ತು. ಹೀಗಾಗಿ ದಿನೇಶ್ ಕಾರ್ತಿಕ್ ತಮ್ಮ ಮರ್ಯಾದೆ ಉಳಿಸಿದ್ದಕ್ಕೆ ಅಶ್ವಿನ್ ಗೆ ಧನ್ಯವಾದ ಸಲ್ಲಿಸಿದ್ದಾರೆ. ಅಶ್ವಿನ್ ಬುದ್ಧಿವಂತಿಕೆಯನ್ನು ನೆಟ್ಟಿಗರು ಕೊಂಡಾಡಿದ್ದಾರೆ.
-Edited by Rajesh Patil