Publish Date: Wed, 26 Oct 2022 (08:10 IST)
Updated Date: Wed, 26 Oct 2022 (08:57 IST)
ರಾಂಚಿ: ಕ್ರಿಕೆಟ್ ನಿಂದ ನಿವೃತ್ತಿಯಾದ ಮೇಲೆ ಧೋನಿ ಐಪಿಎಲ್ ನಲ್ಲಿ ಆಡುವುದರ ಜೊತೆಗೆ ಉದ್ಯಮದಲ್ಲೂ ತೊಡಗಿಸಿಕೊಂಡಿದ್ದಾರೆ.
ಈಗಾಗಲೇ ಧೋನಿ ಸಿನಿಮಾ ನಿರ್ಮಿಸುವ ವಿಚಾರ ತಿಳಿದಿರಬಹುದು. ಧೋನಿ ಸಿನಿಮಾ ತಮಿಳಿನಲ್ಲಿ ನಿರ್ಮಾಣವಾಗಲಿದೆ. ಬಳಿಕ ಹಲವು ಭಾಷೆಗಳಿಗೂ ಡಬ್ ಆಗಲಿದೆ.
ಧೋನಿ ಮತ್ತು ಪತ್ನಿ ಸಾಕ್ಷಿ ಸಿನಿಮಾ ನಿರ್ಮಾಪಕರಾಗಿದ್ದು ಹೋಂ ಬ್ಯಾನರ್ ನಲ್ಲಿ ಸಿನಿಮಾ ನಿರ್ಮಿಸುತ್ತಿದ್ದಾರೆ. ರಮೇಶ್ ತಮಿಳ್ ಮಣಿ ಈ ಸಿನಿಮಾ ನಿರ್ದೇಶಿಸುತ್ತಿದ್ದಾರೆ.
-Edited by Rajesh Patil