Publish Date: Tue, 02 Feb 2021 (10:09 IST)
Updated Date: Tue, 02 Feb 2021 (10:11 IST)
ಚೆನ್ನೈ: ಇಂಗ್ಲೆಂಡ್ ವಿರುದ್ಧ ಶುಕ್ರವಾರದಿಂದ ಆರಂಭವಾಗಲಿರುವ ಮೊದಲ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾ ಕ್ರಿಕೆಟಿಗರು ಅಭ್ಯಾಸ ಶುರು ಮಾಡಿದ್ದಾರೆ.
ಇಷ್ಟು ದಿನ ಕ್ವಾರಂಟೈನ್ ಅವಧಿಯಲ್ಲಿದ್ದ ಕ್ರಿಕೆಟಿಗರಿಗೆ ಈಗ ಕೊರೋನಾ ಟೆಸ್ಟ್ ನೆಗೆಟಿವ್ ವರದಿ ಬಂದ ಕಾರಣ ಅಭ್ಯಾಸಕ್ಕೆ ಅನುಮತಿ ನೀಡಲಾಗಿದೆ. ಹೀಗಾಗಿ ಇಂದಿನಿಂದ ಹೊರಾಂಗಣ ಅಭ್ಯಾಸ ಆರಂಭಿಸಲಿದ್ದಾರೆ. ನಿನ್ನೆ ಟ್ರೈನಿಂಗ್ ಸೆಷನ್ ನಡೆದಿತ್ತು. ಇಂದು ನೆಟ್ ಪ್ರಾಕ್ಟೀಸ್ ಆರಂಭಿಸಲಿದ್ದಾರೆ.