Publish Date: Tue, 02 Feb 2021 (09:37 IST)
Updated Date: Tue, 02 Feb 2021 (09:39 IST)
ಚೆನ್ನೈ: ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿ ಖುದ್ದಾಗಿ ಮೈದಾನದಲ್ಲಿ ವೀಕ್ಷಿಸಲಾಗುತ್ತಿಲ್ಲ ಎಂದು ಬೇಸರದಲ್ಲಿದ್ದೀರಾ? ಆದರೆ ಈಗ ತಮಿಳುನಾಡು ಕ್ರಿಕೆಟ್ ಅಸೋಸಿಯೇಷನ್ ಸಿಹಿ ಸುದ್ದಿ ನೀಡಿದೆ.
ದ್ವಿತೀಯ ಟೆಸ್ಟ್ ಪಂದ್ಯಕ್ಕೆ ಶೇ. 50 ರಷ್ಟು ಪ್ರೇಕ್ಷಕರ ಹಾಜರಾತಿಗೆ ಒಪ್ಪಿಗೆ ನೀಡಲಾಗಿದೆ. ಹೊಸ ಕೊವಿಡ್ ನಿಯಮಗಳನುಸಾರವಾಗಿ ಅರ್ಧದಷ್ಟು ಪ್ರೇಕ್ಷಕರಿಗೆ ಮೈದಾನಕ್ಕೆ ಪ್ರವೇಶ ನೀಡಲಾಗುತ್ತಿದೆ. ಮಾಧ‍್ಯಮ ಸಿಬ್ಬಂದಿಗಳಿಗೂ ಮೈದಾನಕ್ಕೆ ಪ್ರವೇಶ ಕಲ್ಪಿಸಲಾಗಿದೆ.