ಅಹಮ್ಮದಾಬಾದ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದ ಎರಡನೇ ದಿನದಲ್ಲಿ ಮೊದಲ ಅವಧಿಯಲ್ಲೂ ಆಸ್ಟ್ರೇಲಿಯಾ ಬ್ಯಾಟರ್ ಗಳ ಅಬ್ಬರ ಮುಂದುವರಿದಿದೆ.
ಮೊದಲ ದಿನವಿಡೀ ಆಡಿ ಭಾರತಕ್ಕೆ ಸಿಕ್ಕಿದ್ದು ನಾಲ್ಕು ವಿಕೆಟ್. ಆಸ್ಟ್ರೇಲಿಯಾ ಇದೀಗ ದ್ವಿತೀಯ ದಿನದಾಟದಲ್ಲಿ 4 ವಿಕೆಟ್ ನಷ್ಟಕ್ಕೆ 331 ರನ್ ಗಳಿಸಿದೆ. ನಿನ್ನೆ ಶತಕ ಗಳಿಸಿದ್ದ ಉಸ್ಮಾನ್ ಖವಾಜ 145 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ.
ಅವರಿಗೆ ಜೊತೆಯಾಗಿದ್ದ ಕ್ಯಾಮರೂನ್ ಗ್ರೀನ್ ಕೂಡಾ 84 ರನ್ ಗಳಿಸಿದ್ದು ಶತಕದ ಅಂಚಿನಲ್ಲಿದ್ದಾರೆ. ಇಂದು ಬೌಲರ್ ಗಳಿಗೆ ಒಂದೇ ಒಂದು ವಿಕೆಟ್ ದಕ್ಕಿಲ್ಲ. ಇದರಿಂದಾಗಿ ಈ ಪಂದ್ಯ ನೀರಸವಾಗಿ ಸಾಗುತ್ತಿದೆ. ಒಂದು ವೇಳೆ ಈ ಪಂದ್ಯ ಡ್ರಾ ಆದರೂ ಟೀಂ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ದೃಷ್ಟಿಯಿಂದ ಸಂಕಷ್ಟಕ್ಕೆ ಸಿಲುಕಲಿದೆ.