Publish Date: Fri, 09 Feb 2024 (13:24 IST)
Updated Date: Fri, 09 Feb 2024 (13:28 IST)
ಮುಂಬೈ: ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾಗೆ ಗಾಯಾಳುಗಳದ್ದೇ ಚಿಂತೆಯಾಗಿದೆ. ಇದೀಗ ಗಾಯಾಳುಗಳ ಲಿಸ್ಟ್ ಗೆ ಮತ್ತೊಬ್ಬ ಆಟಗಾರನ ಸೇರ್ಪಡೆಯಾಗಿದೆ.
ಟೀಂ ಇಂಡಿಯಾ ಮಧ್ಯಮ ಕ್ರಮಾಂಕದ ಬ್ಯಾಟಿಗ ಶ್ರೇಯಸ್ ಅಯ್ಯರ್ ಗೆ ಮತ್ತೆ ಬೆನ್ನು ನೋವು ಮರುಕಳಿಸಿದ್ದು, ಮುಂದಿನ ಟೆಸ್ಟ್ ಪಂದ್ಯಗಳಿಗೆ ಲಭ್ಯರಾಗುವುದು ಅನುಮಾನ ಎನ್ನಲಾಗಿದೆ. ಅಭ್ಯಾಸದ ವೇಳೆ ಅಯ್ಯರ್ ಬೆನ್ನು ನೋವು ಅನುಭವಿಸಿದ್ದಾರೆ. ಹೀಗಾಗಿ ಅವರನ್ನು ಮುಂದಿನ ಮೂರು ಟೆಸ್ಟ್ ಪಂದ್ಯಗಳಿಂದ ಹೊರಗಿಡಲಾಗಿದೆ ಎಂಬ ಮಾತು ಕೇಳಿಬರುತ್ತಿದೆ.
ಈ ಬಗ್ಗೆ ಅಧಿಕೃತ ಮಾಹಿತಿ ಹೊರಬಂದಿಲ್ಲ. ಆದರೆ ಉಳಿದೆಲ್ಲಾ ಆಟಗಾರರ ಕಿಟ್ ವಿಶಾಖಪಟ್ಟಣಂನಿಂದ ರಾಜ್ ಕೋಟ್ ಗೆ ಕಳುಹಿಸಿಕೊಡಲಾಗಿದೆ. ಆದರೆ ಅಯ್ಯರ್ ಅವರ ಕಿಟ್ ಮಾತ್ರ ಕಳುಹಿಸಲಾಗಿಲ್ಲ. ಹೀಗಾಗಿ ಅಯ್ಯರ್ ಮುಂದಿನ ಪಂದ್ಯಗಳಿಗೆ ಅಲಭ್ಯರಾಗುತ್ತಾರರೆ ಎನ್ನಲಾಗಿದೆ.
ಇತ್ತೀಚೆಗಿನ ದಿನಗಳಲ್ಲಿ ಪದೇ ಪದೇ ಅಯ್ಯರ್ ಬೆನ್ನು ನೋವಿನ ಸಮಸ್ಯೆಗೊಳಗಾಗುತ್ತಿದ್ದಾರೆ. ಈ ಸರಣಿಯಲ್ಲಿ ಎರಡು ಪಂದ್ಯಗಳಲ್ಲಿ ಆಡಿಯೂ ಅವರಿಂದ ಹೇಳಿಕೊಳ್ಳುವಂತಹ ರನ್ ಬಂದಿಲ್ಲ. ಹೀಗಾಗಿ ಅಯ್ಯರ್ ಅನುಪಸ್ಥಿತಿ ತಂಡಕ್ಕೆ ಅಷ್ಟೊಂದು ಕಾಡದು. ಹಾಗಿದ್ದರೂ ಕೆಎಲ್ ರಾಹುಲ್ ನಂತಹ ಅನುಭವಿ ಆಟಗಾರರು ಮುಂದಿನ ಪಂದ್ಯಕ್ಕೆ ಕಮ್ ಬ್ಯಾಕ್ ಮಾಡದೇ ಇದ್ದರೆ ಅಯ್ಯರ್ ಅನುಪಸ್ಥಿತಿ ಭಾರತಕ್ಕೆ ದೊಡ್ಡ ಹೊಡೆತ ನೀಡಲಿದೆ.