Publish Date: Thu, 08 Feb 2024 (15:55 IST)
Updated Date: Thu, 08 Feb 2024 (15:59 IST)
ಮುಂಬೈ: ಇಂಗ್ಲೆಂಡ್ ವಿರುದ್ಧ ಕೊನೆಯ ಮೂರು ಟೆಸ್ಟ್ ಪಂದ್ಯಗಳಿಗೆ ಟೀಂ ಇಂಡಿಯಾ ಸ್ಟಾರ್ ಬ್ಯಾಟಿಗ ವಿರಾಟ್ ಕೊಹ್ಲಿ ತಂಡಕ್ಕೆ ಮರಳುತ್ತರಾ ಎನ್ನುವುದು ಇನ್ನೂ ಖಚಿತವಾಗಿಲ್ಲ.
ಕೌಟುಂಬಿಕ ಕಾರಣ ನೀಡಿ ಕೊಹ್ಲಿ ಮೊದಲ ಎರಡು ಪಂದ್ಯಗಳಿಂದ ಹೊರಗುಳಿದಿದ್ದರು. ಮೂರನೇ ಟೆಸ್ಟ್ ಗೂ ಅವರು ಅಲಭ್ಯರಾಗಲಿದ್ದಾರೆ. ಆದರೆ ಕೊನೆಯ ಎರಡು ಪಂದ್ಯಗಳಿಗೆ ಲಭ್ಯರಾಗಬಹುದು ಎಂಬ ಸುದ್ದಿಗಳು ಹರಿಡಿತ್ತು. ಆದರೆ ಯಾವುದೂ ಅಧಿಕೃತವಾಗಿಲ್ಲ. ಅಂತಿಮ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾ ಘೋಷಣೆಯೂ ಆಗಿಲ್ಲ.
ಬಿಸಿಸಿಐ ಅಧಿಕಾರಿಗಳ ಹೇಳಿಕೆ
ಈ ನಡುವೆ ಬಿಸಿಸಿಐ ಅಧಿಕಾರಿಗಳು ಕೊಹ್ಲಿ ಲಭ್ಯತೆ ಕುರಿತಾದ ಅನಿಶ್ಚಿತತೆಯ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಇನ್ನೂ ಯಾವುದೂ ಅಂತಿಮವಾಗಿಲ್ಲ. ಕೊಹ್ಲಿ ತಾನು ಮುಂದಿನ ಪಂದ್ಯಗಳಿಗೆ ಲಭ್ಯರಿರುತ್ತಾರೆಯೇ ಎಂಬ ಬಗ್ಗೆ ನಮಗೆ ಇನ್ನೂ ಏನನ್ನೂ ಹೇಳಿಲ್ಲ ಎಂದು ಬಿಸಿಸಿಐ ಅಧಿಕಾರಿಗಳು ಹೇಳಿದ್ದಾರೆ.
ಇಂದು ಆಯ್ಕೆಗಾರರು ಟೀಂ ಇಂಡಿಯಾ ಪ್ರಕಟಿಸುವ ಸಾಧ್ಯತೆಯಿದೆ. ಆಯ್ಕೆ ಸಮಿತಿ ಕೊಹ್ಲಿ ಲಭ್ಯರಿರುತ್ತಾರೆ ಎನ್ನುವ ಭರವಸೆಯಲ್ಲಿದೆ. ಆದರೆ ಬಿಸಿಸಿಐ ಅಧಿಕಾರಿಗಳು ನಮಗೆ ಮಾಹಿತಿ ನೀಡಿಲ್ಲ ಎಂದಿದ್ದಾರೆ. ಒಂದು ವೇಳೆ ಕೊಹ್ಲಿ ಲಭ್ಯರಿರುತ್ತಾರೆ ಎಂದಾದರೆ ತಕ್ಷಣವೇ ಅವರು ತಂಡಕ್ಕೆ ಆಯ್ಕೆಯಾಗುವುದರಲ್ಲಿ ಎರಡು ಮಾತಿಲ್ಲ. ಆದರೆ ಸದ್ಯಕ್ಕೆ ಯಾವುದೇ ಮಾಹಿತಿಯಿಲ್ಲ ಎಂದಿದ್ದಾರೆ. ಈ ಮೂಲಕ ಮುಂದಿನ ಪಂದ್ಯಕ್ಕೆ ಕೊಹ್ಲಿ ಲಭ್ಯತೆ ಬಗ್ಗೆ ಇರುವ ಗೊಂದಲಗಳು ಮುಂದುವರಿದಿದೆ. ಅಂತಿಮವಾಗಿ ಇಂದು ಟೀಂ ಇಂಡಿಯಾ ಪ್ರಕಟಣೆಯಾಗುವಾಗ ಸ್ಪಷ್ಟತೆ ಸಿಗಲಿದೆ.