Select Your Language

Notifications

webdunia
webdunia
webdunia
webdunia

ಸೋತಾಗ ಯಾರೂ ಇಲ್ಲ, ಗೆದ್ದಾಗ ಎಲ್ಲರೂ ಇರ್ತಾರೆ: ಜಸ್ಪ್ರೀತ್ ಬುಮ್ರಾ ಟಾಂಗ್ ಕೊಟ್ಟಿದ್ದು ಯಾರಿಗೆ?

Jasprit Bumrah

Krishnaveni K

ಮುಂಬೈ , ಗುರುವಾರ, 8 ಫೆಬ್ರವರಿ 2024 (10:34 IST)
ಮುಂಬೈ: ಟೀಂ ಇಂಡಿಯಾ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ನಿನ್ನೆ ಪ್ರಕಟಿಸಿದ್ದ ಸ್ಟೋರಿ ಎಲ್ಲರೂ ಹುಬ್ಬೇರುವಂತೆ ಮಾಡಿದೆ.

ನಿನ್ನೆ ಬಿಡುಗಡೆಯಾಗಿದ್ದ ಐಸಿಸಿ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ಬುಮ್ರಾ ನಂ.1 ಬೌಲರ್ ಆಗಿ ಹೊರಹೊಮ್ಮಿದ್ದಾರೆ. ಈ ಮೂಲಕ ಮೂರೂ ಫಾರ್ಮ್ಯಾಟ್ ನಲ್ಲಿ ನಂ.1 ಬೌಲರ್ ಎನಿಸಿಕೊಂಡ ಹೆಮ್ಮೆ ಅವರದ್ದಾಗಿತ್ತು. ಈ ದಾಖಲೆ ಮಾಡಿದ ಬೆನ್ನಲ್ಲೇ ಬುಮ್ರಾ ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ಸ್ಟೋರಿ ಹಾಕಿಕೊಂಡಿದ್ದು, ಇದನ್ನು ನೋಡಿ ನೆಟ್ಟಿಗರು ಬುಮ್ರಾ ಟಾಂಗ್ ಕೊಟ್ಟಿದ್ದು ಯಾರಿಗೆ ಎಂದು ತಲೆಕೆಡಿಸಿಕೊಂಡಿದ್ದಾರೆ.

ಬುಮ್ರಾ ಸ್ಟೋರಿಯಲ್ಲಿ ಏನಿತ್ತು?
ತಮ್ಮ ಇನ್ ಸ್ಟಾ ಪುಟದಲ್ಲಿ ಬುಮ್ರಾ ಒಂದು ಖಾಲಿ ಗ್ಯಾಲರಿ ಹಾಗೂ ಇನ್ನೊಂದು ಪ್ರೇಕ್ಷಕರಿಂದ ಭರ್ತಿಯಾದ ಗ್ಯಾಲರಿಯ ಫೋಟೋ ಪ್ರಕಟಿಸಿ ಸಪೋರ್ಟ್ ವರ್ಸಸ್ ಕಂಗ್ರಾಜ್ಯುಲೇಷನ್ಸ್ ಎಂದು ಬರೆದುಕೊಂಡಿದ್ದರು. ಅಂದರೆ ಅದರ ಅರ್ಥ ಸೋತಾಗ ಯಾರೂ ಇರಲ್ಲ, ಗೆದ್ದಾಗ ಎಲ್ಲರೂ ಅಭಿನಂದಿಸುತ್ತಾರೆ ಎಂದಾಗಿತ್ತು. ಅಷ್ಟಕ್ಕೂ ಐಸಿಸಿ ಶ್ರೇಯಾಂಕದಲ್ಲಿ ನಂ.1 ಸ್ಥಾನ ಪಡೆದ ಬೆನ್ನಲ್ಲೇ ಬುಮ್ರಾ ಯಾರನ್ನು ಉದ್ದೇಶಿಸಿ ಈ ಪೋಸ್ಟ್ ಹಾಕಿದರು ಎಂದು ಅಭಿಮಾನಿಗಳು ತಮ್ಮಲ್ಲೇ ಚರ್ಚಿಸಿಕೊಂಡಿದ್ದಾರೆ.

ಕೆಲವರು ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯ ಮೇಲಿನ ಅಸಮಾಧಾನವನ್ನು ಈ ರೀತಿ ಹೊರಹಾಕಿರಬಹುದು ಎಂದುಕೊಂಡಿದ್ದಾರೆ. ಮುಂಬೈ ರೋಹಿತ್ ಶರ್ಮಾರನ್ನು ಕಿತ್ತು ಹಾಕಿ ಹಾರ್ದಿಕ್ ಪಾಂಡ್ಯಗೆ ನಾಯಕತ್ವ ನೀಡಿದ್ದು ಬುಮ್ರಾಗೆ ಕೊಂಚವೂ ಇಷ್ಟವಿಲ್ಲ. ಇದೀಗ ನಂ.1 ಸ್ಥಾನಕ್ಕೇರಿದ ಬೆನ್ನಲ್ಲೇ ಮುಂಬೈ ಬುಮ್ರಾಗೆ ಅಭಿನಂದಿಸಿ ಪೋಸ್ಟ್ ಹಾಕಿತ್ತು. ಇದಕ್ಕೇ ಬುಮ್ರಾ ಈ ರೀತಿ ಟಾಂಗ್ ಕೊಟ್ಟಿರಬಹುದೇ ಎಂದು ಅಭಿಮಾನಿಗಳು ಊಹಿಸಿದ್ದಾರೆ. ಇಲ್ಲವೇ ಇದು ತಮ್ಮನ್ನು ಟೀಕಿಸುವ ಜನರಿಗೆ ನೀಡಿದ ಸಾಮಾನ್ಯ ಪ್ರತ್ಯುತ್ತರವಿರಬಹುದು ಎಂದೂ ಅಂದುಕೊಳ್ಳಬಹುದು. ಒಟ್ಟಿನಲ್ಲಿ ಬುಮ್ರಾ ಹಾಕಿದ ಒಂದು ಸ್ಟೋರಿ ಜನರ ತಲೆಯಲ್ಲಿ ನಾನಾ ಪ್ರಶ್ನೆ ಹುಟ್ಟುಹಾಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

100 ಕೋಟಿ ಒಪ್ಪಂದ ಮುರಿದುಕೊಂಡ ವಿರಾಟ್ ಕೊಹ್ಲಿ