Select Your Language

Notifications

webdunia
webdunia
webdunia
webdunia

ದ.ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಟೀಂ ಇಂಡಿಯಾದಲ್ಲೊಂದು ಅಚ್ಚರಿ!

ದ.ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಟೀಂ ಇಂಡಿಯಾದಲ್ಲೊಂದು ಅಚ್ಚರಿ!
ಮುಂಬೈ , ಭಾನುವಾರ, 28 ಜನವರಿ 2018 (12:08 IST)
ಮುಂಬೈ: ಭಾರತ ಮತ್ತು ದ.ಆಫ್ರಿಕಾ ವಿರುದ್ಧ ಫೆಬ್ರವರಿಯಲ್ಲಿ ನಡೆಯಲಿರುವ ಟಿ20 ಸರಣಿಗೆ ಟೀಂ ಇಂಡಿಯಾ ಆಯ್ಕೆ ಮಾಡಲಾಗಿದ್ದು, ಇದುವರೆಗೆ ಸ್ಥಾನ ಪಡೆಯಲು ಹವಣಿಸುತ್ತಿದ್ದ ಸುರೇಶ್ ರೈನಾಗೆ ಸ್ಥಾನ ನೀಡಲಾಗಿದೆ.
 

ಫೆಬ್ರವರಿ 18 ರಿಂದ ಟಿ20 ಸರಣಿ ಆರಂಭವಾಗಲಿದೆ. ಇದಕ್ಕಾಗಿ ವಿರಾಟ್ ಕೊಹ್ಲಿ ನೇತೃತ್ವದ 16 ಮಂದಿಯ ಟೀಂ ಇಂಡಿಯಾ ಸದಸ್ಯರನ್ನು ಆಯ್ಕೆ ಸಮಿತಿ ಆಯ್ಕೆ ಮಾಡಿದೆ.

ಕನ್ನಡಿಗ ಕೆಎಲ್ ರಾಹುಲ್, ಮನೀಶ್ ಪಾಂಡೆ ಈ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಸುರೇಶ್ ರೈನಾ ಹೊರತುಪಡಿಸಿ ಬೇರೆ ಯಾವುದೇ ಹೊಸ ಮುಖ ಅಥವಾ ಹಳೇ ಆಟಗಾರರಿಗೆ ಸ್ಥಾನ ನೀಡಲಾಗಿಲ್ಲ.

ತಂಡ ಇಂತಿದೆ: ವಿರಾಟ್ ಕೊಹ್ಲಿ, ಧೋನಿ, ಕೆಎಲ್ ರಾಹುಲ್,  ಶಿಖರ್ ಧವನ್‍,  ರೋಹಿತ್ ಶರ್ಮಾ,  ಸರೇಶ್ ರೈನಾ,  ದಿನೇಶ್ ಕಾರ್ತಿಕ್,  ಹಾರ್ದಿಕ್ ಪಾಂಡ್ಯ, ಮನೀಶ್ ಪಾಂಡೆ,  ಅಕ್ಸರ್ ಪಟೇಲ್,  ಯಜವೇಂದ್ರ ಚಾಹಲ್, ಕುಲದೀಪ್ ಯಾದವ್, ಭುವನೇಶ್ವರ್ ಕುಮಾರ್,  ಜಸ್ಪ್ರೀತ್ ಬುಮ್ರಾ, ಜಯದೇವ್ ಉನಾದ್ಕಟ್ ಮತ್ತು ಶಾರ್ದುಲ್ ಠಾಕುರ್.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ ಬಿಡ್ಡಿಂಗ್: ಕರ್ನಾಟಕದ ರಣಜಿ ಕ್ರಿಕೆಟಿಗನಿಗೆ ಖುಲಾಯಿಸಿದ ಅದೃಷ್ಟ!