Publish Date: Tue, 28 May 2019 (09:39 IST)
Updated Date: Tue, 28 May 2019 (09:41 IST)
ಲಂಡನ್: ಅಭ್ಯಾಸ ನಡೆಸುವಾಗ ಕೈಗೆ ಗಾಯ ಮಾಡಿಕೊಂಡಿದ್ದ ಟೀಂ ಇಂಡಿಯಾ ಯುವ ಕ್ರಿಕೆಟಿಗ ವಿಜಯ್ ಶಂಕರ್ ಚೇತರಿಸಿಕೊಂಡಿದ್ದು ಅಭ್ಯಾಸಕ್ಕೆ ಮರಳಿದ್ದಾರೆ.
ವಿಶ್ವಕಪ್ ಅಭ್ಯಾಸ ಪಂದ್ಯಕ್ಕೆ ಮೊದಲು ವಿಜಯ್ ಶಂಕರ್ ನೆಟ್ಸ್ ನಲ್ಲಿ ಅಭ್ಯಾಸ ನಡೆಸುತ್ತಿದ್ದಾಗ ಕೈಗೆ ಗಾಯಮಾಡಿಕೊಂಡಿದ್ದರು. ಇದರಿಂದಾಗಿ ತಕ್ಷಣವೇ ಪೆವಿಲಿಯನ್ ಗೆ ಮರಳಿದ್ದ ವಿಜಯ್ ನಂತರ ನ್ಯೂಜಿಲೆಂಡ್ ವಿರುದ್ಧ ಅಭ್ಯಾಸ ಪಂದ್ಯದಲ್ಲಿ ಆಡಿರಲಿಲ್ಲ.
ಇದೀಗ ಚೇತರಿಸಿಕೊಂಡಿರುವುದು ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ಗೆ ತಲೆನೋವು ನಿವಾರಣೆಯಾಗಿದೆ. ಇಂದು ಬಾಂಗ್ಲಾದೇಶ ವಿರುದ್ಧ ಅಭ್ಯಾಸ ಪಂದ್ಯದಲ್ಲಿ ವಿಜಯ್ ಶಂಕರ್ ಆಡುವ ನಿರೀಕ್ಷೆಯಿದೆ.