Publish Date: Tue, 28 May 2019 (08:58 IST)
Updated Date: Tue, 28 May 2019 (09:00 IST)
ಲಂಡನ್: ಟೀಂ ಇಂಡಿಯಾ ಹಿರಿಯ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಧೋನಿ ತಮಗೆ ಬೇಕೆನಿಸಿದಾಗ ನಿವೃತ್ತಿಯಾಗಬಹುದು ಎಂದು ಆಸ್ಟ್ರೇಲಿಯಾದ ಸ್ಪಿನ್ ದಿಗ್ಗಜ ಶೇನ್ ವಾರ್ನ್ ಹೇಳಿದ್ದಾರೆ.
ಧೋನಿ ಒಂದು ವೈಫಲ್ಯ ಕಂಡಾಗಲೂ ಅವರ ನಿವೃತ್ತಿ ಬಗ್ಗೆ ಕೆಣಕುವ ಟೀಕಾಕಾರರಿಗೆ ಶೇನ್ ಈ ರೀತಿ ತಿರುಗೇಟು ನೀಡಿದ್ದಾರೆ. ಧೋನಿ ತಮಗೆ ಬೇಕೆನಿಸಿದಾಗ ನಿವೃತ್ತರಾಗುತ್ತಾರೆ. ಅವರಲ್ಲಿ ಅಷ್ಟು ಪ್ರತಿಭೆ ಇನ್ನೂ ಉಳಿದಿದೆ ಎಂದು ಶೇನ್ ಹೇಳಿದ್ದಾರೆ.
‘ಧೋನಿ ಭಾರತೀಯ ಕ್ರಿಕೆಟ್ ಗೆ ಏನೆಲ್ಲಾ ಒಳಿತು ಮಾಡಲು ಸಾಧ್ಯವೋ ಅದೆಲ್ಲವನ್ನೂ ಮಾಡಿದ್ದಾರೆ. ಅವರ ನಿವೃತ್ತಿ ಬಗ್ಗೆ, ಅವರನ್ನು ವಿಶ್ವಕಪ್ ಗೆ ಆಯ್ಕೆ ಮಾಡಿದ್ದನ್ನೇ ಪ್ರಶ್ನಿಸುವ ಜನರಿಗೆ ಏನನ್ನಬೇಕು’ ಎಂದು ಶೇನ್ ಖಾರವಾಗಿ ಪ್ರಶ್ನಿಸಿದ್ದಾರೆ.