Select Your Language

Notifications

webdunia
webdunia
webdunia
webdunia

ಟೀಂ ಇಂಡಿಯಾದಲ್ಲಿ ಕೊಹ್ಲಿ ಆತ್ಮವಿಶ್ವಾಸ ತುಂಬುವವರು, ಧೋನಿ ಸ್ವಾತಂತ್ರ್ಯ ನೀಡುವವರಂತೆ

ಟೀಂ ಇಂಡಿಯಾದಲ್ಲಿ ಕೊಹ್ಲಿ ಆತ್ಮವಿಶ್ವಾಸ ತುಂಬುವವರು, ಧೋನಿ ಸ್ವಾತಂತ್ರ್ಯ ನೀಡುವವರಂತೆ
ಮುಂಬೈ , ಮಂಗಳವಾರ, 28 ಮೇ 2019 (09:01 IST)
ಮುಂಬೈ: ಟೀಂ ಇಂಡಿಯಾದಲ್ಲಿ ನಾಯಕ ವಿರಾಟ್ ಕೊಹ್ಲಿಯೇ ಆದರೂ ಯುವ ಕ್ರಿಕೆಟಿಗರಿಗೆ ಧೋನಿಯೂ ಅನಭಿಷಕ್ತ ಕ್ಯಾಪ್ಟನ್. ಮಾಜಿ ನಾಯಕನ ಮಾತಿಗೆ ಈಗಲೂ ತಂಡದಲ್ಲಿ ಅಷ್ಟೇ ಗೌರವವಿದೆ.


ವಿರಾಟ್ ಕೊಹ್ಲಿಗೆ ಧೋನಿಯಿದ್ದರೆ ತಂಡದಲ್ಲಿ ಬಲ ಬರುತ್ತದೆ. ಇಂತಿಪ್ಪ ಧೋನಿ ಮತ್ತು ವಿರಾಟ್ ಕೊಹ್ಲಿ ತಂಡದ ಇತರ ಸದಸ್ಯರ ಪಾಲಿಗೆ ಹೇಗಿರುತ್ತಾರೆ ಎಂದು ಸ್ಪಿನ್ನರ್  ಕುಲದೀಪ್ ಯಾದವ್ ಬಹಿರಂಗಪಡಿಸಿದ್ದಾರೆ.

‘ಕ್ಯಾಪ್ಟನ್ ಕೊಹ್ಲಿ ನಮಗೆ ಆತ್ಮವಿಶ್ವಾಸ ತುಂಬುವ ಕೆಲಸ ಮಾಡುತ್ತಾರೆ. ಧೋನಿ ನಮಗೆ ನಿರ್ಧಾರ ಕೈಗೊಳ್ಳುವ ಸ್ವಾತಂತ್ರ್ಯ ನೀಡುತ್ತಾರೆ’ ಎಂದು ಕುಲದೀಪ್ ಹೊಗಳಿದ್ದಾರೆ. ಇದಕ್ಕೆ ಮೊದಲು ಕುಲದೀಪ್ ಧೋನಿ ನಿರ್ಧಾರಗಳನ್ನು ಕೆಲವೊಮ್ಮೆ ಕೈಗೊಡುತ್ತವೆ ಎಂದು ಹೇಳಿ ವಿವಾದಕ್ಕೆ ಕಾರಣರಾಗಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಧೋನಿ ಯಾವಾಗ ಬೇಕಾದರೂ ನಿವೃತ್ತಿಯಾಗಬಹುದು!