Publish Date: Thu, 05 Mar 2026 (10:15 IST)
Updated Date: Thu, 05 Mar 2026 (10:17 IST)
ಮುಂಬೈ: ಟಿ20 ವಿಶ್ವಕಪ್ ನಲ್ಲಿ ಇಂದು ಟೀಂ ಇಂಡಿಯಾ ವಿರುದ್ಧ ಸೆಮಿಫೈನಲ್ ಆಡಲಿರುವ ಇಂಗ್ಲೆಂಡ್ ತಂಡ ವಾಂಖೆಡೆಯಲ್ಲಿರುವ ಭಾರತೀಯ ಅಭಿಮಾನಿಗಳ ಸದ್ದು ಅಡಗಿಸುವುದಾಗಿ ಸವಾಲು ಹಾಕಿದೆ.
ಇಂಗ್ಲೆಂಡ್ ಬೌಲರ್ ಸ್ಯಾಮ್ ಕ್ಯುರೇನ್ ಈ ಸವಾಲು ಹಾಕಿದ್ದಾರೆ. ನಿನ್ನೆ ನಡೆದ ಮೊದಲ ಸೆಮಿಫೈನಲ್ ನಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸಿ ನ್ಯೂಜಿಲೆಂಡ್ ಫೈನಲ್ ಗೇರಿದೆ. ಇಂದು ಎರಡನೇ ಸೆಮಫೈನಲ್ ಮುಂಬೈನಲ್ಲಿ ನಡೆದಿದ್ದು ಇಂಗ್ಲೆಂಡ್ ಮತ್ತು ಟೀಂ ಇಂಡಿಯಾ ಮುಖಾಮುಖಿಯಾಗುತ್ತಿದೆ.
ನಿನ್ನೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಸ್ಯಾಮ್ ಕ್ಯುರೇನ್, ವಾಂಖೆಡೆ ಮೈದಾನದಲ್ಲಿ ಭಾರತೀಯ ಪ್ರೇಕ್ಷಕರನ್ನು ಸೈಲೆಂಟ್ ಮಾಡುವುದಾಗಿ ಹೇಳಿದ್ದಾರೆ. ಈ ಹಿಂದೆ 2023 ರ ಏಕದಿನ ವಿಶ್ವಕಪ್ ಫೈನಲ್ ಗೆ ಮುನ್ನ ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕುಮಿನ್ಸ್ ಭಾರತೀಯ ಪ್ರೇಕ್ಷಕರನ್ನು ಸೈಲೆಂಟ್ ಮಾಡುವುದಾಗಿ ಹೇಳಿದ್ದರು. ಅದರಂತೆ ಮಾಡಿದ್ದರು ಕೂಡಾ.
ಇದೀಗ ಸ್ಯಾಮ್ ಕ್ಯುರೇನ್ ಅದನ್ನೇ ಫಾಲೋ ಮಾಡಲು ಹೊರಟಿದ್ದಾರೆ. ನಾವು ಯಾವ ತಂಡಕ್ಕೂ ಹೆದರಲ್ಲ. ಪಂದ್ಯ ನೋಡಲು ಬಂದ ಪ್ರೇಕ್ಷಕರು ಸೈಲೆಂಟ್ ಆಗಿದ್ದಾರೆ ಎಂದರೆ ನಾವು ಯಶಸ್ವಿಯಾಗಿದ್ದವೆ ಎಂದರ್ಥ. ಹೀಗಾಗಿ ನಾವು ಪ್ರೇಕ್ಷಕರನ್ನು ಸೈಲೆಂಟ್ ಮಾಡಲು ಬಯಸುತ್ತೇವೆ ಎಂದು ಸವಾಲು ಹಾಕಿದ್ದಾರೆ.