Select Your Language

Notifications

webdunia
webdunia
webdunia
webdunia

T20 WC: ಅಭಿಷೇಕ್ ಬಿಟ್ಟು ಸಂಜು ಹಾಕ್ಲಾ ಎಂದಿದ್ದ ಸೂರ್ಯಕುಮಾರ್ ಯಾದವ್: ಇದೀಗ ಫುಲ್ ಟ್ರೋಲ್

Sanju Samson-Suryakumar Yadav
ಕೋಲ್ಕತ್ತಾ: ಸಂಜು ಸ್ಯಾಮ್ಸನ್ ಗೆ ಅವಕಾಶ ನೀಡಲು ಅಭಿಷೇಕ್ ಶರ್ಮಾನನ್ನು ತೆಗೆದು ಹಾಕಲಾ ಎಂದು ಪತ್ರಕರ್ತರನ್ನೇ ವ್ಯಂಗ್ಯ ಮಾಡಿದ್ದ ಸೂರ್ಯಕುಮಾರ್ ಯಾದವ್. ಆದರೆ ಇಂದು ಅದೇ ಸಂಜು ಸ್ಯಾಮ್ಸನ್ ನಿಂದಾಗಿ ಟೀಂ ಇಂಡಿಯಾ ವಿಶ್ವಕಪ್ ಸೆಮಿಫೈನಲ್ ಗೇರಿದೆ. ಇದಕ್ಕಾಗಿ ಫ್ಯಾನ್ಸ್ ಈಗ ಸೂರ್ಯಕುಮಾರ್ ಯಾದವ್ ರನ್ನು ಫುಲ್ ಟ್ರೋಲ್ ಮಾಡುತ್ತಿದ್ದಾರೆ.

ಅಭಿಷೇಕ್ ಶರ್ಮಾ ಸತತ ಎರಡು ಪಂದ್ಯಗಳಲ್ಲಿ ಸೊನ್ನೆ ಸುತ್ತಿದಾಗ ಪತ್ರಿಕಾಗೋಷ್ಠಿಯಲ್ಲಿ ಸೂರ್ಯಕುಮಾರ್ ಯಾದವ್ ಗೆ ಮುಂದಿನ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಗೆ ಅವಕಾಶ ಕೊಡ್ತೀರಾ ಎಂದು ಕೇಳಿದ್ದರು. ಅದಕ್ಕೆ ವ್ಯಂಗ್ಯ ನಗೆ ನಕ್ಕಿದ್ದ ಸೂರ್ಯ, ‘ಯಾರನ್ನು ಹೊರಗಿಟ್ಟು ಸಂಜುಗೆ ಅವಕಾಶ ಕೊಡಲಿ? ಅಭಿಷೇಕ್ ಶರ್ಮಾರನ್ನು ಹೊರಗಿಡಬೇಕಾ?’ ಎಂದಿದ್ದರು.

ಕಳೆದ ಎರಡು ಪಂದ್ಯಗಳಲ್ಲಿ ರಿಂಕು ಸಿಂಗ್ ಬದಲಿಗೆ ಆಡುವ ಬಳಗದಲ್ಲಿ ಸ್ಥಾನ ಪಡೆದಿದ್ದ ಸಂಜು ಆರಂಭಿಕರಾಗಿ ಕಣಕ್ಕಿಳಿದಿದ್ದರು. ಇದರಿಂದಾಗಿ ಇಶಾನ್ ಮೂರನೇ ಕ್ರಮಾಂಕದಲ್ಲಿ ಆಡುತ್ತಿದ್ದಾರೆ. ಜಿಂಬಾಬ್ವೆ ವಿರುದ್ಧ ದೊಡ್ಡ ಮೊತ್ತ ಗಳಿಸದೇ ಇದ್ದರೂ ಸ್ಪೋಟಕ ಆರಂಭ ನೀಡಿದ್ದರು. ನಿನ್ನೆಯ ಪಂದ್ಯದಲ್ಲಿ ಸಂಜು ಬ್ಯಾಟಿಂಗ್ ನಿಂದಾಗಿಯೇ ಟೀಂ ಇಂಡಿಯಾ ದೊಡ್ಡ ಮೊತ್ತ ಚೇಸ್ ಮಾಡಲು ಸಾಧ್ಯವಾಗಿದ್ದು. ನಿನ್ನೆ ಸೋತಿದ್ದರೆ ಟೀಂ ಇಂಡಿಯಾ ಸೆಮಿಫೈನಲ್ ಗೇರುತ್ತಿರಲಿಲ್ಲ.ಇತ್ತ ಅಭಿಷೇಕ್ ಶರ್ಮಾ ನಿನ್ನೆಯೂ ವಿಫಲರಾಗಿದ್ದರು.

ಹೀಗಾಗಿ ಫ್ಯಾನ್ಸ್ ಸೂರ್ಯಕುಮಾರ್ ಯಾದವ್ ರನ್ನು ಟ್ರೋಲ್ ಮಾಡುತ್ತಿದ್ದಾರೆ. ಈಗ ನಿಮಗೆ ಸೂರ್ಯಕುಮಾರ್ ಬೆಲೆ ಏನೆಂದು ಅರ್ಥವಾಗಿರಬೇಕು ಎಂದು ಕೆಲವರು ಹೇಳಿದ್ದಾರೆ. ಮತ್ತೆ ಕೆಲವರು ನಿನ್ನೆಯ ಪಂದ್ಯದ ಬಳಿಕ ಸಂಜು ಮುಂದೆ ಹ್ಯಾಟ್ ತೆಗೆದು ಬೆನ್ನು ಬಾಗಿಸಿ ನಮಿಸಿದ ಸೂರ್ಯಕುಮಾರ್ ಯಾದವ್ ವಿಡಿಯೋ ಟ್ರೋಲ್ ಮಾಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

Ind vs WI, T20 WC: ಟೀಕೆಗಳಿಗೆ ಅಬ್ಬರದ ಬ್ಯಾಟಿಂಗ್‌ನಿಂದಲೇ ಉತ್ತರಿಸಿದ ಸಂಜು ಸ್ಯಾಮ್ಸನ್‌