Daily Horoscope

Select Your Language

Notifications

webdunia
webdunia
webdunia
webdunia

T20 WC: ಸತತ ಮೂರನೇ ಬಾರಿಗೆ ಇಂಗ್ಲೆಂಡ್ ವಿರುದ್ಧ ಸೆಮಿಫೈನಲ್: ಟೀಂ ಇಂಡಿಯಾ ಇಂದು ಗೆಲ್ಲುತ್ತಾ

Team India in T20 WC
ಮುಂಬೈ: ಟಿ20 ವಿಶ್ವಕಪ್ ನ ಎರಡನೇ ಸೆಮಿಫೈನಲ್ ನಲ್ಲಿ ಇಂದು ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಸೆಣಸಾಡಲಿದೆ. ಇದು ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾಕ್ಕೆ ಸತತ ಮೂರನೇ ಟಿ20 ವಿಶ್ವಕಪ್ ಸೆಮಿಫೈನಲ್.
 

ಕಳೆದ ಟಿ20 ವಿಶ್ವಕಪ್ ಗೆ ಹೋಲಿಸಿದರೆ ಈ ಟಿ20 ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಇದುವರೆಗಿನ ಹಾದಿ ಸುಗಮವಾಗಿರಲಿಲ್ಲ. ದಕ್ಷಿಣ ಆಫ್ರಿಕಾ ವಿರುದ್ಧ ಸೂಪರ್ 8 ಪಂದ್ಯವನ್ನು ಸೋತಿತ್ತು. ಬ್ಯಾಟಿಂಗ್ ಹುಳುಕುಗಳೂ ಹೊರಗೆ ಬಂದಿವೆ. ಪ್ರತೀ ಪಂದ್ಯದಲ್ಲಿ ಒಂದು ಅಥವಾ ಇಬ್ಬರು ಆಟಗಾರರನ್ನೇ ಅವಲಂಬಿಸಿರುತ್ತದೆ.

ಇದೀಗ ನಾಕೌಟ್ ಹಂತದಲ್ಲಿ ಈ ಹುಳುಕುಗಳನ್ನು ಸರಿಪಡಿಸಬೇಕಿದೆ. ಈ ಪಂದ್ಯ ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆಯುತ್ತಿದೆ. ಈ ಮೈದಾನ ಟೀಂ ಇಂಡಿಯಾಕ್ಕೆ ಅದೃಷ್ಟ ತಾಣವೆಂದೇ ಹೇಳಬಹುದು. ಆದರೆ ಈ ಬಾರಿ ಕೊಂಚ ಬೌಲರ್ ಗಳಿಗೆ ಅನುಕೂಲವಾಗುವಂತಹ ಪಿಚ್ ತಯಾರಿಸಲಾಗಿದೆ ಎಂಬ ಸುದ್ದಿ ಕೇಳಿಬರುತ್ತಿದೆ.

ಇಂಗ್ಲೆಂಡ್ ಮತ್ತು ಟೀಂ ಇಂಡಿಯಾ ಇದು ಮೂರನೇ ಬಾರಿಗೆ ಸೆಮಿಫೈನಲ್ ನಲ್ಲಿ ಎದುರಾಗುತ್ತಿದೆ. 2022 ರಲ್ಲಿ ಇಂಗ್ಲೆಂಡ್ ವಿರುದ್ಧ ಸೆಮಿಫೈನಲ್ ನಲ್ಲಿ ಭಾರತ 10 ವಿಕೆಟ್ ಗಳ ಹೀನಾಯ ಸೋಲು ಕಂಡಿತ್ತು. 2024 ರಲ್ಲಿ ಇಂಗ್ಲೆಂಡ್ ತಂಡವನ್ನು ಭಾರತ ಸೋಲಿಸಿತ್ತು. ಇದೀಗ ಮೂರನೇ ಬಾರಿಗೆ ಎರಡೂ ತಂಡಗಳೂ ಮುಖಾಮುಖಿಯಾಗುತ್ತಿದೆ.

ಸೆಮಿಫೈನಲ್ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಯಾವುದೇ ಬದಲಾವಣೆ ಸಾಧ್ಯತೆಯಿಲ್ಲ. ಅಭಿಷೇಕ್ ಶರ್ಮಾ ಫಾರ್ಮ್ ಗೆ ಬಂದರೆ ಟೀಂ ಇಂಡಿಯಾ ದೊಡ್ಡ ತಲೆನೋವು ಮಾಯವಾಗಲಿದೆ. ಇಂಗ್ಲೆಂಡ್ ಕಠಿಣ ಎದುರಾಳಿಯಾಗಿದ್ದು ಟೀಂ ಇಂಡಿಯಾ ಬೌಲರ್ ಗಳಿಗೂ ಇಂದು ಸತ್ವ ಪರೀಕ್ಷೆ ಎದುರಾಗಲಿದೆ. ಇಂದಿನ ಈ ಪಂದ್ಯ  ಸಂಜೆ 7 ಗಂಟೆಗೆ ಆರಂಭವಾಗಲಿದೆ. ಸ್ಟಾರ್ ಸ್ಪೋರ್ಟ್ಸ್ ಮತ್ತು ಜಿಯೋ ಹಾಟ್ ಸ್ಟಾರ್ ನಲ್ಲಿ ನೇರಪ್ರಸಾರ ವೀಕ್ಷಿಸಬಹುದಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸೋಫಿ ಶೈನ್‌ರನ್ನು ಮದುವೆಯಾದ ಬೆನ್ನಲ್ಲೇ ಮಾಜಿ ಪತ್ನಿಯಿಂದ ಶಿಖರ್ ಧವನ್ ಸಿಕ್ತು ಹಣ, ಯಾವಾ ಕಾರಣದಲ್ಲಿ