Daily Horoscope

Select Your Language

Notifications

webdunia
webdunia
webdunia
webdunia

T20 WC: ಟೀಂ ಇಂಡಿಯಾ ಗೆಲುವಿಗೆ ಆ ಎರಡು ಶಾಟ್ ಕಾರಣ, ಯಾರೂ ಅದರ ಬಗ್ಗೆ ಮಾತಾಡಲ್ಲ ಎಂದು ಬೇಸರಿಸಿದ ಜಸ್ಪ್ರೀತ್ ಬುಮ್ರಾ

Jasprit Bumrah
ಕೋಲ್ಕತ್ತಾ: ವೆಸ್ಟ್ ಇಂಡೀಸ್ ವಿರುದ್ಧ ಟಿ20 ವಿಶ್ವಕಪ್ ಸೂಪರ್ 8 ಹಂತದ ಕೊನೆಯ ಪಂದ್ಯವನ್ನು ಟೀಂ ಇಂಡಿಯಾ ಗೆಲ್ಲಲು ಆ ಎರಡು ಶಾಟ್ ಗಳೇ ಕಾರಣ, ಆದರೆ ಯಾರೂ ಆ ಬಗ್ಗೆ ಮಾತನಾಡುತ್ತಿಲ್ಲ ಎಂದು ವೇಗಿ ಜಸ್ಪ್ರೀತ್ ಬುಮ್ರಾ ಬೇಸರ ವ್ಯಕ್ತಪಡಿಸಿದ್ದಾರೆ.

ನಿನ್ನೆಯ ಪಂದ್ಯದಲ್ಲಿ ಅದ್ಭುತ ಬೌಲಿಂಗ್ ಮಾಡಿದ್ದ ಜಸ್ಪ್ರೀತ್ ಬುಮ್ರಾ ಗೆಲುವಿನ ಬಳಿಕ ತಮ್ಮ ಪತ್ನಿ, ನಿರೂಪಕಿ ಸಂಜನಾ ಗಣೇಶನ್ ಗೆ ಸಂದರ್ಶನ ನೀಡಿದ್ದರು. ಈ ವೇಳೆ ಸಂಜು ಸ್ಯಾಮ್ಸನ್ ಇನಿಂಗ್ಸ್ ಹೊಗಳಿದ ಬುಮ್ರಾ, ಗೆಲುವಿಗೆ ಶಿವಂ ದುಬೆ ಆ ಎರಡು ಬೌಂಡರಿಗಳೇ ಕಾರಣ ಎಂದಿದ್ದಾರೆ.

ಸಂಜು ಸ್ಯಾಮ್ಸನ್ ನಿನ್ನೆ ಅದ್ಭುತವಾಗಿ ಆಡಿದರು. ಕಳೆದ ಕೆಲವು ತಿಂಗಳಲ್ಲಿ ಅವರು ಸಾಕಷ್ಟು ಏಳುಬೀಳುಗಳನ್ನು ಕಂಡಿದ್ದಾರೆ. ಹೀಗಾಗಿ ಈ ಹಂತದಲ್ಲಿ ತಂಡಕ್ಕೆ ಬಂದು ಇಂಥಾ ಪ್ರದರ್ಶನ ನೀಡುವುದು ಸಾಮಾನ್ಯ ಮಾತಲ್ಲ. ಆದರೆ ಭಾರತದ ಗೆಲುವಿಗೆ ಕಾರಣವಾಗಿದ್ದು ಆ ಎರಡು ಶಾಟ್ ಎಂದಿದ್ದಾರೆ.

ಶಿವಂ ದುಬೆ ಒತ್ತಡದಲ್ಲಿದ್ದಾಗ 18 ನೇ ಓವರ್ ನಲ್ಲಿ 12 ಎಸೆತಗಳಿಂದ 17 ರನ್ ಬೇಕಾಗಿತ್ತು. ಈ ವೇಳೆ ಓವರ್ ನ ಎರಡನೇ ಎಸೆತದಲ್ಲಿ ಹಾರ್ದಿಕ್ ಪಾಂಡ್ಯ ಔಟ್ ಆದರು. ಆಗ ಷ್ಟೇ ಕ್ರೀಸ್ ಗೆ ಬಂದ ಶಿವಂ ದುಬೆ ಒತ್ತಡದ ಸಂದರ್ಭದಲ್ಲಿಯೂ ಸತತ 2 ಬೌಂಡರಿ ಗಳಿಸಿ ತಂಡದ ಗೆಲುವು ಸುಲಭವಾಗಿಸಿದರು.

ಹೀಗಾಗಿ ಈ ಬಗ್ಗೆ ಬುಮ್ರಾ ಸಂದರ್ಶನದಲ್ಲಿ ಉಲ್ಲೇಖಿಸಿದ್ದು, ಕೆಲವರಿಗೆ ಇದು ಎರಡು ಬೌಂಡರಿ ತಾನೇ ಯಾರು ಬೇಕಾದರೂ ಗಳಿಸುತ್ತಿದ್ದರು. ಬಾಲ್ ಮತ್ತು ರನ್ ನಡುವೆ ಹೆಚ್ಚು ಅಂತರವಿರಲಿಲ್ಲ ಅಲ್ವಾ ಎನಿಸಬಹುದು. ಆದರೆ ಒಬ್ಬ ಕ್ರಿಕೆಟ್ ಬಲ್ಲವನಿಗೆ ಮಾತ್ರ ಆ ಶಾಟ್ ಗಳ ಬೆಲೆ ಗೊತ್ತಾಗಬಹುದು. ಆ ಎರಡು ಬೌಂಡರಿಗಳೇ ನಮ್ಮ ಗೆಲುವನ್ನು ಸುಲಭವಾಗಿಸಿದ್ದು. ಆದರೆ ಯಾರೂ ಅದರ ಬಗ್ಗೆ ಮಾತನಾಡಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

T20 WC: ಟೀಂ ಇಂಡಿಯಾಗೆ ಸೆಮಿಫೈನಲ್ ನಲ್ಲಿ ಯಾರು ಎದುರಾಳಿ, ಯಾವಾಗ ಇಲ್ಲಿದೆ ವಿವರ