Publish Date: Thu, 10 Nov 2022 (08:40 IST)
Updated Date: Thu, 10 Nov 2022 (08:54 IST)
ಅಡಿಲೇಡ್: ಇಂಗ್ಲೆಂಡ್ ವಿರುದ್ಧ ಇಂದು ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯವಾಡಲಿರುವ ಟೀಂ ಇಂಡಿಯಾಗೆ ವಿಕೆಟ್ ಕೀಪರ್ ಆಯ್ಕೆಯೇ ತಲೆನೋವಾಗಿದೆ.
ಹಿರಿಯ ದಿನೇಶ್ ಕಾರ್ತಿಕ್ ಮತ್ತು ರಿಷಬ್ ಪಂತ್ ನಡುವೆ ಯಾರನ್ನು ಆಯ್ಕೆ ಮಾಡುವುದು ಎಂಬ ತಲೆನೋವು ರೋಹಿತ್ ರದ್ದಾಗಿದೆ. ಟೂರ್ನಿಯ ಮೊದಲ ನಾಲ್ಕು ಪಂದ್ಯಗಳಲ್ಲಿ ದಿನೇಶ್ ಕಾರ್ತಿಕ್ ಗೆ ಅವಕಾಶ ನೀಡಲಾಗಿತ್ತು. ಆದರೆ ದಿನೇಶ್ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ.
ಹೀಗಾಗಿ ಕಳೆದ ಪಂದ್ಯದಲ್ಲಿ ರಿಷಬ್ ಪಂತ್ ಗೆ ಅವಕಾಶ ನೀಡಲಾಗಿತ್ತು. ಆದರೆ ರಿಷಬ್ ಕೂಡಾ ಬೇಜವಾಬ್ಧಾರಿ ಹೊಡೆತಕ್ಕೆ ಕೈ ಹಾಕಿ ಔಟಾಗಿದ್ದರು. ಇದರಿಂದಾಗಿ ಈಗ ಮತ್ತೆ ದಿನೇಶ್ ಕಾರ್ತಿಕ್ ರನ್ನು ಆಡಿಸಬೇಕೇ ಅಥವಾ ರಿಷಬ್ ಗೆ ಮತ್ತೊಂದು ಅವಕಾಶ ನೀಡಬೇಕೇ ಎಂಬ ಉಭಯ ಸಂಕಟ ರೋಹಿತ್ ರದ್ದಾಗಿದೆ.