ಅಡಿಲೇಡ್: ಟಿ20 ವಿಶ್ವಕಪ್ ನ ಎರಡನೇ ಸೆಮಿಫೈನಲ್ ನಲ್ಲಿ ಇಂದು ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧ ಪಂದ್ಯವಾಡಲಿದೆ.
ಬಿ ಗುಂಪಿನ ಅಗ್ರ ಸ್ಥಾನಿಯಾಗಿರುವ ಭಾರತಕ್ಕೆ ಎ ಗುಂಪಿನ ಎರಡನೇ ಸ್ಥಾನಿ ಇಂಗ್ಲೆಂಡ್ ವಿರುದ್ಧ ಗೆಲ್ಲುವ ವಿಶ್ವಾಸವಿದೆ. ಆದರೆ ಟೀಂ ಇಂಡಿಯಾಕ್ಕೆ ಬ್ಯಾಟಿಂಗ್ ನಲ್ಲಿ ಆರಂಭದ್ದೇ ಚಿಂತೆ. ರಾಹುಲ್ ಮಿಂಚಿದರೆ ರೋಹಿತ್ ಕೈಕೊಡುತ್ತಿದ್ದಾರೆ. ರೋಹಿತ್ ಮಿಂಚಿದರೆ ರಾಹುಲ್ ಕೈ ಕೊಡುತ್ತಿದ್ದಾರೆ. ಸೆಮಿಫೈನಲ್ ನಂತಹ ಮಹತ್ವದ ಘಟ್ಟದಲ್ಲಿ ರೋಹಿತ್-ರಾಹುಲ್ ಸ್ಪೋಟಕ ಆರಂಭ ಒದಗಿಸುವುದು ಮುಖ್ಯವಾಗುತ್ತದೆ. ಆದರೆ ಇಷ್ಟೂ ದಿನಗಳ ಪಂದ್ಯದಲ್ಲಿ ಆರಂಭ ಉತ್ತಮವಾಗಿಲ್ಲ ಎನ್ನುವುದು ಚಿಂತೆಯ ವಿಷಯ.
ಮಧ‍್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್, ವಿರಾಟ್ ಕೊಹ್ಲಿ ತಂಡದ ಬ್ಯಾಟಿಂಗ್ ಆಧಾರ ಸ್ತಂಬ. ಆದರೆ ಹಾರ್ದಿಕ್ ಪಾಂಡ್ಯರಿಂದ ಖ್ಯಾತಿಗೆ ತಕ್ಕ ಆಟ ಬಂದಿಲ್ಲ. ರಿಷಬ್ ಪಂತ್ ಗೆ ಇಂದು ಮತ್ತೊಂದು ಅವಕಾಶ ಸಿಗುವ ಸಾದ್ಯತೆಯಿದೆ. ಡೇವಿಡ್ ಮಲನ್, ಬೆನ್ ಸ್ಟೋಕ್ಸ್, ಜೋಸ್ ಬಟ್ಲರ್, ಕ್ರಿಸ್ ವೋಕ್ಸ್ ಭಾರತದ ವಿರುದ್ಧ ಚೆನ್ನಾಗಿಯೇ ಆಡುತ್ತಾರೆ. ಹೀಗಾಗಿ ಭಾರತ ಸರ್ವಾಂಗೀಣ ಪ್ರದರ್ಶ ನೀಡಬೇಕಿದೆ. ಈ ಪಂದ್ಯ ಭಾರತೀಯ ಕಾಲಮಾನ ಪ್ರಕಾರ ಮಧ್ಯಾಹ್ನ 1.30 ಕ್ಕೆ ನಡೆಯಲಿದೆ.