Select Your Language

Notifications

webdunia
webdunia
webdunia
webdunia

ಸೆಮಿಫೈನಲ್ ಗೆ ಮುನ್ನ ರೋಹಿತ್ ಶರ್ಮಾಗೆ ಗಾಯ: ಆತಂಕದಲ್ಲಿ ಟೀಂ ಇಂಡಿಯಾ

ರೋಹಿತ್ ಶರ್ಮಾ
Photo Courtesy: Twitter
ಅಡಿಲೇಡ್: ಇಂಗ್ಲೆಂಡ್ ವಿರುದ್ಧ ಗುರುವಾರ ನಡೆಯಲಿರುವ ಟಿ20 ವಿಶ್ವಕಪ್ ಸೆಮಿಫೈನಲ್ ಗೆ ಮುನ್ನ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾಗೆ ಗಾಯವಾಗಿದೆ.

ಅಡಿಲೇಡ್ ಓವಲ್ ಮೈದಾನದಲ್ಲಿ ರೋಹಿತ್ ಶರ್ಮಾ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿದ್ದ ವೇಳೆ ಮುಂಗೈಗೆ ಬಾಲ್ ತಗುಲಿ ನೋವಿಗೊಳಗಾಗಿದ್ದರು. ತಕ್ಷಣವೇ ತಂಡದ ಫಿಸಿಯೋ ರೋಹಿತ್ ಗೆ ಚಿಕಿತ್ಸೆ ನೀಡಿದರು.

ಬಳಿಕ ಚೇತರಿಸಿಕೊಂಡ ರೋಹಿತ್ ಅಭ್ಯಾಸ ಮುಂದುವರಿಸಿದ್ದಾರೆ. ರೋಹಿತ್ ಗಾಯಗೊಂಡ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೇ ಅಭಿಮಾನಿಗಳು ಆತಂಕಗೊಂಡಿದ್ದರು. ಮಹತ್ವದ ಪಂದ್ಯಕ್ಕೆ ಮೊದಲು ಯಾವುದೇ ಆಟಗಾರನಿಗೂ ತೊಂದರೆಯಾಗದೇ ಇದ್ದರೆ ಸಾಕು ಎಂಬುದು ಅಭಿಮಾನಿಗಳ ಪ್ರಾರ್ಥನೆ.

Share this Story:

Follow Webdunia kannada

ಮುಂದಿನ ಸುದ್ದಿ

ನಾಯಕನಾಗಿ ದಾಖಲೆ ಮಾಡಿದರೂ ರೋಹಿತ್ ಬ್ಯಾಟಿಗನಾಗಿ ವಿಫಲ