Select Your Language

Notifications

webdunia
webdunia
webdunia
webdunia

T20 WC: ಟಿ20 ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ವೇಳಾಪಟ್ಟಿ ಇಲ್ಲಿದೆ

Team India

Krishnaveni K

ಮುಂಬೈ , ಮಂಗಳವಾರ, 3 ಫೆಬ್ರವರಿ 2026 (10:48 IST)
ಮುಂಬೈ: ಐಸಿಸಿ ಟಿ20 ವಿಶ್ವಕಪ್ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಫೆಬ್ರವರಿ 7 ರಿಂದ ಲೀಗ್ ಹಂತದ ಪಂದ್ಯಗಳು ಆರಂಭವಾಗಲಿದ್ದು, ಟೀಂ ಇಂಡಿಯಾ ವೇಳಾಪಟ್ಟಿ ಇಲ್ಲಿದೆ.

ಈ ಬಾರಿ ಭಾರತದ ಆತಿಥ್ಯದಲ್ಲಿ ಟಿ20 ವಿಶ್ವಕಪ್ ನಡೆಯುತ್ತಿದೆ. ಇನ್ನು, ಭಾರತದಲ್ಲಿ ಆಡಲೊಪ್ಪದ ಪಾಕಿಸ್ತಾನದ ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯಲಿದೆ. ಟೀಂ ಇಂಡಿಯಾ ಹಾಲಿ ಚಾಂಪಿಯನ್ ಕೂಡಾ ಆಗಿರುವುದರಿಂದ ಮತ್ತಷ್ಟು ನಿರೀಕ್ಷೆಯ ಭಾರ ಹೊತ್ತುಕೊಂಡು ಮೈದಾನಕ್ಕಿಳಿಯಲಿದೆ. ಫೆಬ್ರವರಿ 7 ಕ್ಕೆ ಆರಂಭವಾಗಲಿರುವ ಟೂರ್ನಿ ಮಾರ್ಚ್ 8 ಕ್ಕೆ ಮುಕ್ತಾಯವಾಗಲಿದೆ. ಟೀಂ ಇಂಡಿಯಾ ವಿಶ್ವಕಪ್ ಲೀಗ್ ಪಂದ್ಯಕ್ಕೆ ಮುನ್ನ ದಕ್ಷಿಣ ಆಫ್ರಿಕಾ ವಿರುದ್ಧ ಫೆಬ್ರವರಿ 4 ರಂದು ಅಭ್ಯಾಸ ಪಂದ್ಯವಾಡಲಿದೆ. ಫೆಬ್ರವರಿ 7 ರಿಂದ ಲೀಗ್ ಹಂತದ ಪಂದ್ಯಗಳು ಆರಂಭವಾಗಲಿದೆ.

ಟೀಂ ಇಂಡಿಯಾ ವೇಳಾಪಟ್ಟಿ ಹೀಗಿದೆ
ದಿನಾಂಕ            ತಂಡ                      ಸ್ಥಳ
ಫೆ.7         ಭಾರತ-ಯುಎಸ್ಎ              ಮುಂಬೈ
ಫೆ.12              ಭಾರತ-ನಮೀಬಿಯಾ                    ದೆಹಲಿ
ಫೆ.15              ಭಾರತ-ಪಾಕಿಸ್ತಾನ               ಕೊಲಂಬೊ
ಫೆ.18              ಭಾರತ-ನೆದರ್ಲ್ಯಾಂಡ್ಸ್          ಅಹ್ಮದಾಬಾದ್

ಇಲ್ಲಿಗೆ ಗ್ರೂಪ್ ಹಂತದ ಪಂದ್ಯಗಳು ಮುಕ್ತಾಯವಾಗಲಿದ್ದು, ಇದರ ಫಲಿತಾಂಶದ ಅನುಸಾರ ಮುಂದಿನ ಪಂದ್ಯಗಳು ಇನ್ನಷ್ಟೇ ನಿರ್ಧಾರವಾಗಬೇಕಿದೆ. ಭಾರತ ಆಡುವ ಎಲ್ಲಾ ಪಂದ್ಯಗಳೂ ಸಂಜೆ 7 ಗಂಟೆಗೆ ಆರಂಭವಾಗಲಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ರಾಮಮಂದಿರಕ್ಕೆ ಭೇಟಿ ನೀಡಿದ ಜಹೀರ್ ಖಾನ್: ಮತಾಂತರ ಆಗ್ಬಿಡಿ ಎಂದು ಕಿಡಿ ಕಾರಿದ ಸಂಪ್ರದಾಯವಾದಿಗಳು Video