Select Your Language

Notifications

webdunia
webdunia
webdunia
Saturday, 5 April 2025
webdunia

ಟಿ20 ವಿಶ್ವಕಪ್: ಕೊಹ್ಲಿ-ರೋಹಿತ್ ಭರ್ಜರಿ ಬ್ಯಾಟಿಂಗ್

ಟೀಂ ಇಂಡಿಯಾ
ಸಿಡ್ನಿ , ಗುರುವಾರ, 27 ಅಕ್ಟೋಬರ್ 2022 (14:15 IST)
ಸಿಡ್ನಿ: ಟಿ20 ವಿಶ್ವಕಪ್ ನಲ್ಲಿ ಇಂದು ನೆದರ್ಲ್ಯಾಂಡ್ಸ್ ವಿರುದ್ಧ ಪಂದ್ಯವಾಡುತ್ತಿರುವ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಿ 20 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 179 ರನ್ ಗಳಿಸಿದೆ.

ಭಾರತದ ಪರ ಆರಂಭಿಕರಾಗಿ ಕಣಕ್ಕಿಳಿದ ಕೆಎಲ್ ರಾಹುಲ್-ರೋಹಿತ್ ಜೋಡಿ ಪೈಕಿ ರಾಹುಲ್ ಮತ್ತೆ ವಿಫಲರಾದರು. ಕೇವಲ 9 ರನ್ ಗಳಿಸಿ ಔಟಾದರು. ಬಳಿಕ ಜೊತೆಯಾದ ಕೊಹ್ಲಿ-ರೋಹಿತ್ ಜೋಡಿ ತಂಡಕ್ಕೆ ಉತ್ತಮ ಅಡಿಪಾಯ ಹಾಕಿಕೊಟ್ಟರು.

ಒಟ್ಟು 39 ಎಸೆತ ಎದುರಿಸಿದ ರೋಹಿತ್ 53 ರನ್ ಗಳಿಸಿ ಔಟಾದರು. ಆದರೆ ಕಳೆದ ಪಂದ್ಯದ ಹೀರೋ ವಿರಾಟ್ ಕೊಹ್ಲಿ 44 ಎಸೆತಗಳಲ್ಲಿ 62 ರನ್ ಗಳಿಸಿ ಕೊನೆಯವರೆಗೆ ಅಜೇಯರಾಗುಳಿದರು. ಇನ್ನೊಂದೆಡೆ ಸೂರ್ಯಕುಮಾರ್ ಯಾದವ್ ಕೇವಲ 25 ಎಸೆತಗಳಲ್ಲಿ 50 ರನ್ ಗಳಿಸಿ ಅಜೇಯರಾದರು. ಸೂರ್ಯ ತಮ್ಮ ಖ್ಯಾತಿಗೆ ತಕ್ಕ ಆಟವಾಡಿದ್ದರಿಂದ ಭಾರತ ಉತ್ತಮ ಮೊತ್ತ ಗಳಿಸಲು ಸಾಧ್ಯವಾಯಿತು. ಇದೀಗ ನೆದರ್ಲ್ಯಾಂಡ್ಸ್ ಗೆಲ್ಲಲು 180 ರನ್ ಗಳಿಸಬೇಕಿದೆ.

-Edited by Rajesh Patil

Share this Story:

Follow Webdunia kannada

ಮುಂದಿನ ಸುದ್ದಿ

ಟಿ20 ವಿಶ್ವಕಪ್: ತಪ್ಪು ತೀರ್ಪಿಗೆ ಬಲಿಯಾದ ಕೆಎಲ್ ರಾಹುಲ್