Publish Date: Thu, 27 Oct 2022 (08:30 IST)
Updated Date: Thu, 27 Oct 2022 (08:53 IST)
ಸಿಡ್ನಿ: ಟಿ20 ವಿಶ್ವಕಪ್ ನ ಎರಡನೇ ಪಂದ್ಯವನ್ನು ಇಂದು ಟೀಂ ಇಂಡಿಯಾ ನೆದರ್ಲ್ಯಾಂಡ್ಸ್ ವಿರುದ್ಧ ಆಡುತ್ತಿದೆ.
ನೆದರ್ಲ್ಯಾಂಡ್ಸ್ ದುರ್ಬಲ ಎದುರಾಳಿಯಾಗಿರುವುದರಿಂದ ಟೀಂ ಇಂಡಿಯಾ ಇಂದಿನ ಪಂದ್ಯಕ್ಕೆ ಕೆಲವು ಬದಲಾವಣೆ ಮಾಡಿಕೊಳ್ಳಬಹುದೇ ಎಂಬ ಪ್ರಶ್ನೆ ಮೂಡಿದೆ.
ಅದರಲ್ಲೂ ವಿಶೇಷವಾಗಿ ಪ್ರಮುಖ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯಗೆ ವಿಶ್ರಾಂತಿ ನೀಡುವ ಸಾಧ್ಯತೆಯಿದೆ. ಅವರ ಸ್ಥಾನಕ್ಕೆ ದೀಪಕ್ ಹೂಡಾಗೆ ಅವಕಾಶ ನೀಡುವ ಸಾಧ‍್ಯತೆಯಿದೆ ಎನ್ನಲಾಗಿತ್ತು. ಆದರೆ ಬೌಲಿಂಗ್ ವಿಭಾಗದಲ್ಲಿ ಯಾರಿಗೂ ವಿಶ್ರಾಂತಿ ನೀಡುವ ಯೋಜನೆಯಿಲ್ಲ. ಹಾರ್ದಿಕ್ ಕೂಡಾ ಫಿಟ್ ಆಗಿದ್ದು, ಅವರಿಗೂ ವಿಶ್ರಾಂತಿ ನೀಡುವ ಸಾಧ‍್ಯತೆ ಕಡಿಮೆ ಎಂದು ಈಗಾಗಲೇ ಕೋಚ್ ಪರಸ್ ಮಾಂಬ್ರೆ ಹೇಳಿದ್ದಾರೆ. ಹೀಗಾಗಿ ಹೆಚ್ಚಿನ ಬದಲಾವಣೆ ಸಾಧ‍್ಯತೆ ಕಡಿಮೆ.
-Edited by Rajesh Patil