Publish Date: Thu, 27 Oct 2022 (14:06 IST)
Updated Date: Thu, 27 Oct 2022 (14:08 IST)
ಸಿಡ್ನಿ: ಟಿ20 ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಮತ್ತು ನೆದರ್ಲ್ಯಾಂಡ್ಸ್ ನಡುವೆ ನಡೆಯುತ್ತಿರುವ ಪಂದ್ಯದಲ್ಲಿ ಕೆಎಲ್ ರಾಹುಲ್ ವಿವಾದಾತ್ಮಕ ತೀರ್ಪಿಗೆ ಬಲಿಯಾಗಿದ್ದಾರೆ.
ಕೆಎಲ್ ರಾಹುಲ್ 12 ಎಸೆತ ಎದುರಿಸಿ ಗಳಿಸಿದ್ದು 9 ರನ್. ಈ ವೇಳೆ ಅವರು ವ್ಯಾನ್ ಮಿಕೆರನ್ ಬೌಲಿಂಗ್ ನಲ್ಲಿ ಎಲ್ ಬಿ ಡಬ್ಲ್ಯು ಆಗಿ ಔಟಾದರು.
ಅಸಲಿಗೆ ಅವರು ಔಟಾಗಿರಲಿಲ್ಲ. ರಿಪ್ಲೇನಲ್ಲಿ ನೋಡಿದಾಗ ಚೆಂಡು ವಿಕೆಟ್ ಮಿಸ್ ಆಗಿದ್ದು ಸ್ಪಷ್ಟವಾಗಿತ್ತು. ಒಂದು ವೇಳೆ ಡಿಆರ್ ಎಸ್ ಪಡೆದುಕೊಂಡಿದ್ದರೆ ರಾಹುಲ್ ಬಚಾವ್ ಆಗುತ್ತಿದ್ದರು. ಆದರೆ ಡಿಆರ್ ಎಸ್ ಬಳಸದೇ ಪ್ರಮಾದವೆಸಗಿದರು. ಬಳಿಕ ರೋಹಿತ್ ಶರ್ಮಾಗೂ ಅಂಪಾಯರ್ ತಪ್ಪಾಗಿ ಎಲ್ ಬಿಡಬ್ಲ್ಯು ತೀರ್ಪು ನೀಡಿದ್ದರು. ಆದರೆ ರೋಹಿತ್ ಡಿಆರ್ ಎಸ್ ಬಳಸಿ ವಿಕೆಟ್ ಉಳಿಸಿಕೊಂಡರು.
-Edited by Rajesh Patil