Select Your Language

Notifications

webdunia
webdunia
webdunia
webdunia

ಟಿ20 ವಿಶ್ವಕಪ್ 2024: ಭಾರತ, ಬಾಂಗ್ಲಾದೇಶ ನಡುವಿನ ಇಂದಿನ ಪಂದ್ಯ ನಡೆಯೋದೇ ಡೌಟು

T20 WC 2024

Krishnaveni K

ಆಂಟಿಗುವಾ , ಶನಿವಾರ, 22 ಜೂನ್ 2024 (13:50 IST)
ಆಂಟಿಗುವಾ: ಟಿ20 ವಿಶ್ವಕಪ್ ನಲ್ಲಿ ಇಂದು ಭಾರತ ಮತ್ತು ಬಾಂಗ್ಲಾದೇಶ ನಡುವೆ ಆಂಟಿಗುವಾ ಮೈದಾನದಲ್ಲಿ ಸೂಪರ್ 8 ಪಂದಯ ನಡೆಯುವುದೇ ಅನುಮಾನವಾಗಿದೆ. ಕಾರಣವೇನು ಇಲ್ಲಿ ನೋಡಿ.

ಇಂದು ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 8 ಗಂಟೆಗೆ ಈ ಪಂದ್ಯ ಆರಂಭವಾಗಬೇಕು. ಆದರೆ ಸದ್ಯದ ಹವಾಮಾನ ವರದಿ ಪ್ರಕಾರ ಆಂಟಿಗುವಾದಲ್ಲಿ ಈ ಸಂದರ್ಭದಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಇದರಿಂದ ಪಂದ್ಯದ ಮೇಲೆ ಕಾರ್ಮೋಡ ಕವಿದಿದೆ.

ಟೀಂ ಇಂಡಿಯಾಗೆ ಕೊನೆಯ ಲೀಗ್ ಪಂದ್ಯದಲ್ಲೂ ಮಳೆಯಿಂದಾಗಿ ಆಡಲು ಸಾಧ್ಯವಾಗಿರಲಿಲ್ಲ. ಆದರೆ ಬಳಿಕ ಮೊದಲ ಸೂಪರ್ 8 ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಭರ್ಜರಿ ಜಯ ಗಳಿಸಿತ್ತು. ಸದ್ಯಕ್ಕೆ ಎ ಗುಂಪಿನಲ್ಲಿ ಭಾರತ ನಂ.1 ಸ್ಥಾನದಲ್ಲಿದೆ. ಆದರೆ ಇದೀಗ ಮಳೆ ಭಾರತದ ಹಾದಿ ಕಠಿಣವಾಗಿಸಲಿದೆ.

ಒಂದು ವೇಳೆ ಇಂದು ಪಂದ್ಯ ನಡೆದು ಭಾರತ ಗೆದ್ದರೆ ಸೆಮಿಫೈನಲ್ ಹಾದಿ ಹೆಚ್ಚು ಕಡಿಮೆ ಖಚಿತವಾಗಲಿದೆ. ಆದರೆ ಸೋತರೆ ಮುಂದಿನ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಲಿದೆ. ಕಳೆದ ಬಾರಿ ಟಿ20 ವಿಶ್ವಕಪ್ ನಲ್ಲಿ ಭಾರತ-ಬಾಂಗ್ಲಾದೇಶ ಮುಖಾಮುಖಿಯಾಗಿದ್ದಾಗಲೂ ಮಳೆಯಾಗಿತ್ತು. ಈ ಪಂದ್ಯವನ್ನು ಭಾರತ ಡಕ್ ವರ್ತ್ ಲೂಯಿಸ್ ನಿಯಮದ ಪ್ರಕಾರ 5 ರನ್ ಗಳಿಂದ ರೋಚಕವಾಗಿ ಗೆದ್ದುಕೊಂಡಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

T20 WC 2024: ವೆಸ್ಟ್ ಇಂಡೀಸ್ ವಿರುದ್ಧ ಸೋತ ಯುಎಸ್ ಎ ಸೆಮಿಫೈನಲ್ ಕನಸು ಭಗ್ನ