Daily Horoscope

Select Your Language

Notifications

webdunia
webdunia
webdunia
webdunia

ಟಿ20 ವಿಶ್ವಕಪ್ 2024: ಟೀಂ ಇಂಡಿಯಾಕ್ಕೆ ಇಂದು ಬಾಂಗ್ಲಾ ವಿರುದ್ಧ ಅಭ್ಯಾಸ ಪಂದ್ಯ

Team India
ನ್ಯೂಯಾರ್ಕ್: ಟಿ20 ವಿಶ್ವಕಪ್ ನಲ್ಲಿ ಇಂದು ಟೀಂ ಇಂಡಿಯಾ ಮೊದಲ ಅಭ್ಯಾಸ ಪಂದ್ಯವಾಡಲಿದೆ. ಬಾಂಗ್ಲಾದೇಶ ವಿರುದ್ಧ ಮೊದಲ ಪಂದ್ಯ ನಡೆಯಲಿದೆ.

ಈಗಾಗಲೇ ರೋಹಿತ್ ಶರ್ಮಾ ಪಡೆ ನ್ಯೂಯಾರ್ಕ್ ನಲ್ಲಿ ಬೀಡುಬಿಟ್ಟಿದೆ. ವಿರಾಟ್ ಕೊಹ್ಲಿ ಈಗ ತಡವಾಗಿಯಾದರೂ ತಂಡವನ್ನು ಸೇರಿಕೊಂಡಿದ್ದಾರೆ. ಹೀಗಾಗಿ ಫುಲ್ ಹಾಜರಾತಿಯೊಂದಿಗೆ ಟೀಂ ಇಂಡಿಯಾ ಅಭ್ಯಾಸ ಪಂದ್ಯವಾಡಲಿದೆ.

ನಾಸೌ ಕೌಂಟಿ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯಲಿದೆ. ಭಾರತ ಒಟ್ಟು ಮೂರು ಪಂದ್ಯಗಳನ್ನು ನ್ಯೂಯಾರ್ಕ್ ನಲ್ಲಿ ಆಡಲಿದೆ. ಹೀಗಾಗಿ ಈ ಪಂದ್ಯ ಭಾರತಕ್ಕೆ ನಿಜವಾಗಿಯೂ ಅಭ್ಯಾಸಕ್ಕೆ ವೇದಿಕೆಯಂತಾಗಲಿದೆ.

ಅಮೆರಿಕಾದಲ್ಲಿ ಇದೇ ಮೊದಲ ಬಾರಿಗೆ ಟಿ20 ವಿಶ್ವಕಪ್ ನಡೆಯುತ್ತಿದೆ. ಈಗಾಗಲೇ ಕೆಲವು ಅಭ್ಯಾಸ ಪಂದ್ಯಗಳು ನಡೆದಿವೆ. ಇದೀಗ ಭಾರತ ಮೊದಲ ಬಾರಿಗೆ ಅಭ್ಯಾಸ ಪಂದ್ಯವಾಡುತ್ತಿದೆ. ಟಿ20 ವಿಶ್ವಕಪ್ ಗೆಲ್ಲಲೇಬೇಕು ಎಂದು ಹೊರಟಿರುವ ರೋಹಿತ್ ಪಡೆ ಇಂದು ತನ್ನೆಲ್ಲಾ ಆಟಗಾರರನ್ನು ಕಣಕ್ಕಿಳಿಸಿ ಸಾಮರ್ಥ್ಯ ಪರಿಶೀಲಿಸಲಿದೆ. ಈ ಪಂದ್ಯ ರಾತ್ರಿ 8 ಗಂಟೆಗೆ ನಡೆಯಲಿದೆ. ಟಿ20 ವಿಶ್ವಕಪ್ ನ ಎಲ್ಲಾ ಪಂದ್ಯಗಳ ನೇರಪ್ರಸಾರವನ್ನು ಸ್ಟಾರ್ ಸ್ಪೋರ್ಟ್ಸ್ ಅಥವಾ ಡಿಸ್ನಿ ಹಾಟ್ ಸ್ಟಾರ್ ನಲ್ಲಿ ವೀಕ್ಷಿಸಬಹುದಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪಿಚ್ ಗೆ ನುಗ್ಗಿದ್ದ ಅಭಿಮಾನಿಯ ಶಸ್ತ್ರಚಿಕಿತ್ಸೆಗೆ ನೆರವಾಗಲಿರುವ ಧೋನಿ