Select Your Language

Notifications

webdunia
webdunia
webdunia
webdunia

T20 WC 2024: ಎರಡನೇ ಸೂಪರ್ 8 ಹಣಾಹಣಿಯಲ್ಲಿ ಬಾಂಗ್ಲಾದೇಶ ಬಗ್ಗುಬಡಿಯಲು ಟೀಂ ಇಂಡಿಯಾ ಸಜ್ಜು

Rohit Sharma

Krishnaveni K

ಆಂಟಿಗುವಾ , ಶನಿವಾರ, 22 ಜೂನ್ 2024 (08:51 IST)
ಆಂಟಿಗುವಾ: ಟಿ20 ವಿಶ್ವಕಪ್ 2024 ರಲ್ಲಿ ಇಂದು ಟೀಂ ಇಂಡಿಯಾ ಎರಡನೇ ಸೂಪರ್ 8 ಹಂತದ ಪಂದ್ಯವನ್ನು ಬಾಂಗ್ಲಾದೇಶ ವಿರುದ್ಧ ಆಡಲಿದೆ. ಈ ಪಂದ್ಯ ಆಂಟಿಗುವಾದಲ್ಲಿ ಸರ್ ವಿವಿಯನ್ ರಿಚರ್ಡ್ಸ್ ಮೈದಾನದಲ್ಲಿ ನಡೆಯಲಿದೆ.

ಭಾರತ ಮತ್ತು ಪಾಕಿಸ್ತಾನ ಪಂದ್ಯದಂತೇ ಇತ್ತೀಚೆಗಿನ ದಿನಗಳಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯವೂ ಜಿದ್ದಾಜಿದ್ದಿನಿಂದ ಕೂಡಿರುತ್ತದೆ. 2007 ರಲ್ಲಿ ರಾಹುಲ್ ದ್ರಾವಿಡ್ ನೇತೃತ್ವದ ಟೀಂ ಇಂಡಿಯಾ ಬಾಂಗ್ಲಾದೇಶ ವಿರುದ್ಧ ವಿಶ್ವಕಪ್ ನಲ್ಲಿ ಸೋತ ಬಳಿಕ ಬಾಂಗ್ಲಾ ಆಟಗಾರರು ಕುಹುಕವಾಡಿದ್ದು ಟೀಂ ಇಂಡಿಯಾ ಅಭಿಮಾನಿಗಳನ್ನು ಕೆರಳಿಸಿತ್ತು. ಅದಾದ ಬಳಿಕ ಎರಡೂ ತಂಡಗಳ ನಡುವಿನ ವೈರುಧ್ಯ ಇಂದಿಗೂ ಮುಂದುವರಿದಿದೆ.

ಇದೀಗ ಟಿ20 ವಿಶ್ವಕಪ್ ನಲ್ಲಿ ಎರಡೂ ತಂಡಗಳು ಮುಖಾಮುಖಿಯಾಗುತ್ತಿವೆ. ಈ ಟಿ20 ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಇದುವರೆಗೆ ಬೌಲಿಂಗ್ ನಲ್ಲಿ ಅದ್ಭುತ ಪ್ರದರ್ಶನವನ್ನೇ ನೀಡುತ್ತಾ ಬಂದಿದೆ. ಹಾಗಿದ್ದರೂ ಕಳೆದ ಪಂದ್ಯದಲ್ಲಿ ಸ್ಪಿನ್ನರ್ ಗಳ ನೆರವಾಗುವ ಪಿಚ್ ಎಂಬ ಕಾರಣಕ್ಕೆ ಮೊಹಮ್ಮದ್ ಸಿರಾಜ್ ರನ್ನು ಹೊರಗಿಟ್ಟು ಕುಲದೀಪ್ ಯಾದವ್ ಗೆ ಅವಕಾಶ ನೀಡಲಾಗಿತ್ತು.

ಈ ಟೂರ್ನಿಯಲ್ಲಿ ಇದುವರೆಗೆ ಅವಕಾಶ ಸಿಕ್ಕಿಯೂ ಪ್ರದರ್ಶನ ನೀಡದ ಆಟಗಾರರ ಪೈಕಿ ರವೀಂದ್ರ ಜಡೇಜಾ, ವಿರಾಟ್ ಕೊಹ್ಲಿ ಮತ್ತು ಶಿವಂ ದುಬೆ ಇದ್ದಾರೆ. ಈ ಪೈಕಿ ಕೊಹ್ಲಿಯನ್ನು ಆರಂಭಿಕ ಸ್ಥಾನದಿಂದ ಕಿತ್ತು ಹಾಕಿ ಮತ್ತೆ ಮೂರನೇ ಕ್ರಮಾಂಕ ನೀಡುವಂತೆ ಒತ್ತಾಯಗಳು ಕೇಳಿಬರುತ್ತಿವೆ. ಆದರೆ ಅದಕ್ಕೆ ಮ್ಯಾನೇಜ್ ಮೆಂಟ್ ಇನ್ನೂ ಮನಸ್ಸು ಮಾಡುತ್ತಿಲ್ಲ. ಇತ್ತ ರವೀಂದ್ರ ಜಡೇಜಾ ಎಲ್ಲಾ ಪಂದ್ಯಗಳಲ್ಲೂ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿದ್ದಾರೆ. ಶಿವಂ ದುಬೆಯದ್ದೂ ಹೇಳಿಕೊಳ್ಳುವಂತಹ ಕೊಡುಗೆ ಇಲ್ಲ. ಹೀಗಾಗಿ ಇವರಿಬ್ಬರನ್ನು ಬದಲಾಯಿಸಬೇಕೆಂಬ ಕೂಗು ಕೇಳಿಬಂದಿದೆ. ಇಂದಿನ ಪಂದ್ಯಕ್ಕೆ ಕೆಲವು ಬದಲಾವಣೆ ಖಚಿತವಾಗಿದೆ.

ಇತ್ತ ಬಾಂಗ್ಲಾದೇಶ ತಂಡ ಈಗಲೂ ಅನುಭವಿ ಶಕೀಬ್ ಅಲ್ ಹಸನ್ ರನ್ನು ನಂಬಿಕೊಂಡಿದೆ. ಭಾರತದ ಪ್ರತಿಭಾವಂತ ಬೌಲಿಂಗ್ ಎದುರಿಸಬೇಕಾದರೆ ಬಾಂಗ್ಲಾದ ನಜ್ಮುಲ್ ಹೊಸೈನ್, ಮುಹಮ್ಮದುಲ್ಲ, ತೌಹೀದ್ ಹೃದಯ್ ಮುಂತಾದ ಪ್ರತಿಭಾವಂತರು ತಮ್ಮ ಪ್ರತಿಭೆಗೆ ತಕ್ಕ ಆಟವಾಡಬೇಕಿದೆ. ಈ ಪಂದ್ಯ ಭಾರತೀಯ ಕಾಲಮಾನ ಪ್ರಕಾರ ರಾತ್ರಿ 8 ಗಂಟೆಗೆ ಆರಂಭವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಾನಿಯಾ ಮಿರ್ಜಾ, ಮೊಹಮ್ಮದ್ ಶಮಿ ವಿವಾಹ ಸುದ್ದಿಗೆ ಸಖತ್ ಟ್ವಿಸ್ಟ್