Select Your Language

Notifications

webdunia
webdunia
webdunia
webdunia

T20 World Cup 2024: ಅಫ್ಘಾನಿಸ್ತಾನ ವಿರುದ್ಧ ವೆಸ್ಟ್ ಇಂಡೀಸ್ ಗೆ ಭಾರೀ ಅಂತರದ ಗೆಲುವು

West Indies

Krishnaveni K

ಸೈಂಟ್ ಲೂಸಿಯಾ , ಮಂಗಳವಾರ, 18 ಜೂನ್ 2024 (09:26 IST)
ಸೈಂಟ್ ಲೂಸಿಯಾ: ಟಿ20 ವಿಶ್ವಕಪ್ 2024 ರಲ್ಲಿ ಇಂದು ಕೊನೆಯ ಲೀಗ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ ಅಫ್ಘಾನಿಸ್ತಾನವನ್ನು 104 ರನ್ ಗಳ ಭಾರೀ ಅಂತರದಿಂದ ಸೋಲಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 218 ರನ್ ಗಳ ಬೃಹತ್ ಮೊತ್ತ ಪೇರಿಸಿತು. ವೆಸ್ಟ್ ಇಂಡೀಸ್ ಪರ ಬಿರುಗಾಳಿಯ ಇನಿಂಗ್ಸ್ ಆಡಿದ ನಿಕಲಸ್ ಪೂರನ್ 98 ರನ್ ಗಳಿಸಿ ರನೌಟ್ ಆದರು. ಶತಕ ಗಳಿಸಲಾಗದೇ ನಿರಾಸೆ ಅನುಭವಿಸಿದರು.  ಅವರಿಗೆ ಸಾಥ್ ನೀಡಿದ ಚಾರ್ಲ್ಸ್ 43, ಶೈ ಹೋಪ್ 25, ರೊವ್ಮಾನ್ ಪೊವೆಲ್ 26 ರನ್ ಗಳಿಸಿದರು.

ಈ ಮೊತ್ತ ಬೆನ್ನತ್ತಿದ ಅಫ್ಘಾನಿಸ್ತಾನಕ್ಕೆ ಬ್ಯಾಟಿಗರು ಕೈ ಕೊಟ್ಟರು. ಇಬ್ರಾಹಿಂ ಜಡ್ರಾನ್ 38, ಒಮ್ರಾಝಿ 23 ಮತ್ತು ರಶೀದ್ ಖಾನ್ 18 ರನ್ ಗಳಿಸಿದ್ದು ಬಿಟ್ಟರೆ ಉಳಿದವರಿಂದ ಯಾವುದೇ ರನ್ ಬರಲಿಲ್ಲ. ವಿಂಡೀಸ್ ಪರ ಮಾರಕ ದಾಳಿ ಸಂಘಟಿಸಿದ ಒಬೆಡ್ ಮೆಕಾಯ್ 3, ಗಡಾಕೇಶ್ ಮೋಟಿ, ಅಕೀಲ್ ಹೊಸೇನ್ ತಲಾ 2 ವಿಕೆಟ್ ಕಬಳಿಸಿದರು.

ಅಂತಿಮವಾಗಿ ಅಫ್ಘಾನಿಸ್ತಾನ 16.2 ಓವರ್ ಗಳಲ್ಲಿ 114 ರನ್ ಗಳಿಗೆ ಆಲೌಟ್ ಆಯಿತು. ಈಗಾಗಲೇ ಎರಡೂ ತಂಡಗಳೂ ಸೂಪರ್ 8 ರ ಘಟ್ಟಕ್ಕೆ ಏರಿರುವುದರಿಂದ ಈ ಪಂದ್ಯದ ಫಲಿತಾಂಶ ಯಾವುದೇ ಪರಿಣಾಮ ಬೀರದು. ವಿಂಡೀಸ್ ಮೊದಲ ಸೂಪರ್ 8 ಪಂದ್ಯವನ್ನು ಇಂಗ್ಲೆಂಡ್ ವಿರುದ್ಧ ಜೂನ್ 20 ರಂದು ಮತ್ತು ಅಫ್ಘಾನಿಸ್ತಾನ ಇದೇ ದಿನ ಭಾರತದ ವಿರುದ್ಧ ಪಂದ್ಯವಾಡಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

T20 World Cup 2024: ಕೊನೆಯ ಲೀಗ್ ಪಂದ್ಯವನ್ನು ಸುಲಭವಾಗಿ ಗೆದ್ದ ನ್ಯೂಜಿಲೆಂಡ್