Select Your Language

Notifications

webdunia
webdunia
webdunia
webdunia

T20 World Cup 2024: ಶ್ರೀಲಂಕಾಗೆ ನೆದರ್ಲ್ಯಾಂಡ್ಸ್ ವಿರುದ್ಧ ಭರ್ಜರಿ ಗೆಲುವು, ಅದರೂ ನೋ ಯೂಸ್

T20 World Cup 2024

Krishnaveni K

ಸೈಂಟ್ ಲೂಸಿಯಾ , ಸೋಮವಾರ, 17 ಜೂನ್ 2024 (09:19 IST)
ಸೈಂಟ್ ಲೂಸಿಯಾ: ನೆದರ್ಲ್ಯಾಂಡ್ಸ್ ತಂಡವನ್ನು 83 ರನ್ ಗಳ ಭರ್ಜರಿ ಅಂತರದಿಂದ ಗೆದ್ದರೂ ಶ್ರೀಲಂಕಾ ಸೂಪರ್ 8 ಕ್ಕೇರಲಾಗದೇ ಈ ಟಿ20 ವಿಶ್ವಕಪ್ ಟೂರ್ನಿಯ ಪಯಣ ಮುಗಿಸಿದೆ.

ಈ ವಿಶ್ವಕಪ್ ಕೂಟದಾದ್ಯಂತ ಕನಿಷ್ಠ ಮೊತ್ತಗಳೇ ದಾಖಲಾಗಿದ್ದವು. ಆದರೆ ಈ ಪಂದ್ಯದಲ್ಲಿ ಶ್ರೀಲಂಕಾ ಭರ್ಜರಿ ಬ್ಯಾಟಿಂಗ್ ನಡೆಸಿ 200 ರನ್ ಗಳ ಬೃಹತ್ ಮೊತ್ತ ಪೇರಿಸಿತ್ತು. ಲಂಕಾ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 201 ರನ್ ಗಳಿಸಿತ್ತು. ಲಂಕಾ ಆರಂಭ ಉತ್ತಮವಾಗಿರಲಿಲ್ಲ. ಖಾತೆ ತೆರೆಯುವ ಮೊದಲೇ ನಿಸ್ಸಂಕಾ ಶೂನ್ಯಕ್ಕೆ ನಿರ್ಗಮಿಸಿದ್ದರು. ಆದರೆ ಬಳಿಕ ಕುಸಲ್ ಮೆಂಡಿಸ್ 46, ಧನಂಜಯ ಡಿಸಿಲ್ವ 34 ರನ್ ಗಳಿಸಿದರು. ತಂಡದ ಮೊತ್ತ 200 ರ ಗಡಿ ತಲುಪಲು ನೆರವಾಗಿದ್ದ ಅಸಲಂಕ, ಮ್ಯಾಥ್ಯೂಸ್ ಮತ್ತು ವಣೀಂದು ಹಸರಂಗ. ಅಸಲಂಕ 21 ಎಸೆತಗಳಿಂದ 46, ಮ್ಯಾಥ್ಯೂಶ್ 15 ಎಸೆತಗಳಿಂದ ಅಜೇಯ 30, ಹಸರಂಗ 6 ಎಸೆತಗಳಿಂದ 20 ರನ್ ಗಳಿಸಿದರು.

ಈ ಮೊತ್ತ ಬೆನ್ನತ್ತಿದ ನೆದರ್ಲ್ಯಾಂಡ್ಸ್ 16.4 ಓವರ್ ಗಳಲ್ಲಿ 118 ರನ್ ಗಳಿಗೆ ಸರ್ವಪತನ ಕಂಡಿತು. ಆರಂಭಿಕ ಮೈಕಲ್ ಲೆವಿಟ್ 31, ಸ್ಕಾಟ್ ಎಡ್ವರ್ಡ್ಸ್ 31 ರನ್ ಗಳಿಸಿದರು. ಲಂಕಾ ಪರ ನುವಾನ್ ತುಷಾರ 3, ಹಸರಂಗ, ಪತಿರಾಣ ತಲಾ 2 ವಿಕೆಟ್ ಕಬಳಿಸಿದರು. ಈ ಗೆಲುವು ಎರಡೂ ತಂಡಗಳಿಗೆ ಯಾವುದೇ ಪ್ರಯೋಜನವಾಗಲಿಲ್ಲ. ಯಾಕೆಂದರೆ ಇದಕ್ಕೆ ಮೊದಲು ನಡೆದಿದ್ದ ನೇಪಾಳ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯದಲ್ಲಿ ಬಾಂಗ್ಲಾದೇಶ ಗೆದ್ದುಕೊಂಡಿತ್ತು. ಹೀಗಾಗಿ ಶ್ರೀಲಂಕಾ ಸೂಪರ್ 8 ಕನಸು ಆಗಲೇ ಭಗ್ನವಾಯಿತು. ಆದರೆ ಗೆಲುವಿನೊಂದಿಗೆ ಟೂರ್ನಿ ಕೊನೆಗೊಳಿಸಿದ ತೃಪ್ತಿ ಲಂಕಾದ್ದಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

T20 World Cup 2024: ನೇಪಾಳ ವಿರುದ್ಧ ವಿಶ್ವ ದಾಖಲೆಯ ಗೆಲುವು ಸಾಧಿಸಿದ ಬಾಂಗ್ಲಾದೇಶ