ಕ್ರಿಕೆಟ್ ನ ಎಲ್ಲಾ ದಾಖಲೆಗಳೂ ಅಪಾಯದಲ್ಲಿವೆ ಎಂದು ಸುನಿಲ್ ಗವಾಸ್ಕರ್ ಹೇಳಿದ್ದೇಕೆ?

ಭಾನುವಾರ, 4 ನವೆಂಬರ್ 2018 (09:13 IST)
ಮುಂಬೈ: ಪ್ರಸಕ್ತ ಕ್ರಿಕೆಟ್ ಲೋಕದ ಎಲ್ಲಾ ದಾಖಲೆಗಳೂ ಅಪಾಯದಲ್ಲಿದೆ ಎಂದು ಬ್ಯಾಟಿಂಗ್ ದಿಗ್ಗಜ ಸುನಿಲ್ ಗವಾಸ್ಕರ್ ಹೇಳಿದ್ದಾರೆ. ಅಷ್ಟಕ್ಕೂ ಗವಾಸ್ಕರ್ ಹೀಗೆ ಹೇಳಲು ಕಾರಣವೇನು ಗೊತ್ತಾ?

ಗವಾಸ್ಕರ್ ಹೀಗೆ ಹೇಳಿದ್ದು ವಿರಾಟ್ ಕೊಹ್ಲಿ ಬಗ್ಗೆ. ಟೀಂ ಇಂಡಿಯಾ ನಾಯಕನ ಈಗಿನ ಫಾರ್ಮ್ ನೋಡಿದರೆ ಕ್ರಿಕೆಟ್ ನ ಯಾವ ದಾಖಲೆಗಳಿಗೂ ಉಳಿಗಾಲವಿದ್ದಂತೆ ತೋರುತ್ತಿಲ್ಲ ಎಂದು ಗವಾಸ್ಕರ್ ಹೊಗಳಿದ್ದಾರೆ.

‘ಅತೀ ಹೆಚ್ಚು ರನ್, ಶತಕ ಇಂತಹ ಎಲ್ಲಾ ದಾಖಲೆಗಳೂ ಕೊಹ್ಲಿ ಬ್ಯಾಟಿಂಗ್ ಮಾಡುತ್ತಿರುವ ರೀತಿ ನೋಡಿದರೆ ಧೂಳೀಪಟವಾಗಲಿದೆ. ಸಚಿನ್ ರಂತೆ ಕೊಹ್ಲಿ 40 ವರ್ಷದವರೆಗೆ ಕ್ರಿಕೆಟ್ ಆಡಿದರೆ ಕ್ರಿಕೆಟ್ ನ ಎಲ್ಲಾ ಮಾದರಿಯ ಎಲ್ಲಾ ದಾಖಲೆಗಳೂ ಅವರ ಹೆಸರಿನಲ್ಲಿರಲಿದೆ’ ಎಂದು ಗವಾಸ್ಕರ್ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಮಗು ಜತೆಗೆ ಆಸ್ಪತ್ರೆಯಿಂದ ಹೊರಬರುತ್ತಿರುವ ಸಾನಿಯಾ ಮಿರ್ಜಾ ಫೋಟೋಗಳು ಇದೀಗ ವೈರಲ್