Select Your Language

Notifications

webdunia
webdunia
webdunia
webdunia

ವಿವಾದದ ಬಳಿಕ ಎಚ್ಚೆತ್ತುಕೊಂಡ ಸ್ಟಾರ್ ಸ್ಪೋರ್ಟ್ಸ್: ಕೊಹ್ಲಿ ಬದಲು ರೋಹಿತ್ ಫೋಟೋ ಬಂತು!

ವಿವಾದದ ಬಳಿಕ ಎಚ್ಚೆತ್ತುಕೊಂಡ ಸ್ಟಾರ್ ಸ್ಪೋರ್ಟ್ಸ್: ಕೊಹ್ಲಿ ಬದಲು ರೋಹಿತ್ ಫೋಟೋ ಬಂತು!
ಮುಂಬೈ , ಮಂಗಳವಾರ, 14 ನವೆಂಬರ್ 2023 (17:39 IST)
ಮುಂಬೈ: ನಾಳೆ ನಡೆಯಲಿರುವ ಏಕದಿನ ವಿಶ್ವಕಪ್ ಸೆಮಿಫೈನಲ್ ಬಗ್ಗೆ ಪೋಸ್ಟರ್ ನಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಬದಲು ವಿರಾಟ್ ಕೊಹ್ಲಿ ಫೋಟೋ ಹಾಕಿ ಸ್ಟಾರ್ ಸ್ಪೋರ್ಟ್ಸ್ ಸಂಸ್ಥೆ ವಿವಾದಕ್ಕೀಡಾಗಿತ್ತು.

ಕೇನ್ ವಿಲಿಯಮ್ಸ್ ಪಕ್ಕ ರೋಹಿತ್ ಫೋಟೋ ಬಳಸಬೇಕಿತ್ತು. ಆದರೆ ಅದರ ಬದಲು ವಿರಾಟ್ ಕೊಹ್ಲಿ ಫೋಟೋ ಬದಲಿಸಿದ್ದು, ರೋಹಿತ್ ಫ್ಯಾನ್ಸ್ ಕೆಂಗಣ್ಣಿಗೆ ಗುರಿಯಾಗಿತ್ತು. ನಾಯಕ ರೋಹಿತ್ ರನ್ನು ಕಡೆಗಣಿಸುತ್ತಿರುವುದು ಯಾಕೆ ಎಂದು ಟ್ವಿಟರ್ ನಲ್ಲಿ ಶೇಮ್ ಆನ್ ಸ್ಟಾರ್ ಸ್ಪೋರ್ಟ್ಸ್ ಎಂದು ಟ್ವಿಟರಿಗರು ಟ್ರೆಂಡ್ ಶುರು ಮಾಡಿದ್ದರು.

ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡ ಅಧಿಕೃತ ನೇರಪ್ರಸಾರ ಸಂಸ್ಥೆ ಸ್ಟಾರ್ ಸ್ಪೋರ್ಟ್ಸ್ ಪ್ರಿವ್ಯೂಗೆ ಕೊಹ್ಲಿ ಫೋಟೋ ಇದ್ದ ಜಾಗದಲ್ಲಿ ನಾಯಕ ರೋಹಿತ್ ಶರ್ಮಾ ಫೋಟೋವನ್ನು ಹಾಕಿಕೊಂಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಶ್ವರ್ಯಾ ರೈ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ ಪಾಕ್ ಮಾಜಿ ಕ್ರಿಕೆಟಿಗ ಅಬ್ದುಲ್ ರಜಾಕ್