Select Your Language

Notifications

webdunia
webdunia
webdunia
webdunia

ವಿಮಾನ ನಿಲ್ದಾಣದಿಂದ ನೇರವಾಗಿ ವಾಂಖೆಡೆ ಮೈದಾನಕ್ಕೆ ತೆರಳಿದ ರಾಹುಲ್ ದ್ರಾವಿಡ್

ರಾಹುಲ್ ದ್ರಾವಿಡ್
ಮುಂಬೈ: ಬೆಂಗಳೂರಿನಿಂದ ವಿಶ್ವಕಪ್ ಕೊನೆಯ ಲೀಗ್ ಪಂದ್ಯ ಮುಗಿಸಿ ಟೀಂ ಇಂಡಿಯಾ ಕ್ರಿಕೆಟಿಗರು ಮುಂಬೈಗೆ ಹಾರಿದ್ದರು. ಈ ಪೈಕಿ ಕೋಚ್ ದ್ರಾವಿಡ್ ನೇರವಾಗಿ ತಮ್ಮ ಸಹಾಯಕ ಸಿಬ್ಬಂದಿಗಳೊಂದಿಗೆ ವಾಂಖೆಡೆ ಮೈದಾನಕ್ಕೆ ತೆರಳಿದ್ದಾರೆ.

ನಾಯಕ ರೋಹಿತ್ ಶರ್ಮಾ ಸೇರಿದಂತೆ ಇತರೆ ಕ್ರಿಕೆಟಿಗರು ತಮ್ಮ ಮನೆ, ಹೋಟೆಲ್ ರೂಂಗೆ ತೆರಳಿದರೆ ಕೋಚ್ ದ್ರಾವಿಡ್ ಮಾತ್ರ ತಮ್ಮ ಸಹಾಯಕರಾದ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್, ಬೌಲಿಂಗ್ ಕೋಚ್ ಪರಸ್ ಮಾಂಬ್ರೆ ಅವರೊಂದಿಗೆ ನೇರವಾಗಿ ವಾಂಖೆಡೆ ಮೈದಾನಕ್ಕೆ ತೆರಳಿದ್ದಾರೆ.

ಇಲ್ಲಿ ನಾಳೆ ಟೀಂ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ ಸೆಮಿಫೈನಲ್ ಪಂದ್ಯವಾಡಲಿದೆ. ಹೀಗಾಗಿ ಪಿಚ್ ಪರಿಶೀಲಿಸಲು ಮತ್ತು ಮೈದಾನ ಸಿಬ್ಬಂದಿ ಬಳಿ ಮಾತುಕತೆ ನಡೆಸಲು ದ್ರಾವಿಡ್ ನೇರವಾಗಿ ಮೈದಾನಕ್ಕೆ ತೆರಳಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಏಕದಿನ ವಿಶ್ವಕಪ್: ಸೆಮಿಫೈನಲ್ ಮಳೆಗಾಹುತಿಯಾದರೂ ಟೀಂ ಇಂಡಿಯಾಗಿಲ್ಲ ಚಿಂತೆ!