Publish Date: Wed, 17 Oct 2018 (07:48 IST)
Updated Date: Wed, 17 Oct 2018 (07:51 IST)
ಮುಂಬೈ: ಬಿಗ್ ಬಾಸ್ ನಲ್ಲಿ ಸ್ಪರ್ಧಿಸುತ್ತಿರುವ ಕ್ರಿಕೆಟಿಗ ಶ್ರೀಶಾಂತ್ ಸಚಿನ್ ತೆಂಡುಲ್ಕರ್ ಬಗ್ಗೆ ರಹಸ್ಯವೊಂದನ್ನು ಹೇಳಿದ್ದಾರೆ.
ಮ್ಯಾಚ್ ಫಿಕ್ಸಿಂಗ್ ನಿಂದಾಗಿ ಕ್ರಿಕೆಟ್ ನಿಂದ ನಿಷೇಧಕ್ಕೊಳಗಾಗಿದ್ದ ಶ್ರೀಶಾಂತ್ ಇದೀಗ ಸಲ್ಮಾನ್ ಖಾನ್ ನಿರೂಪಿಸುತ್ತಿರುವ ಬಿಗ್ ಬಾಸ್ ಹಿಂದಿ ಅವತರಣಿಕೆಯಲ್ಲಿ ಸ್ಪರ್ಧಿ. ಬಿಗ್ ಬಾಸ್ ಮನೆಯೊಳಗೆ ಸ್ಪರ್ಧಿಗಳ ಜತೆ ಮಾತನಾಡುವಾಗ ಶ್ರೀಶಾಂತ್ ಹಿಂದೊಮ್ಮೆ ತಮಗೆ ಸಚಿನ್ ಸಹಾಯ ಮಾಡಿದ್ದನ್ನು ಸ್ಮರಿಸಿಕೊಂಡಿದ್ದಾರೆ.
2011 ರ ವಿಶ್ವಕಪ್ ಗೆಲುವಿನ ನಂತರ ತಂಡದ ಸಂದರ್ಶನವೊಂದು ನಡೆಯುತ್ತಿತ್ತು. ಆ ಕಾರ್ಯಕ್ರಮದಲ್ಲಿ ಎಲ್ಲರ ಸಾಧನೆಯನ್ನೂ ಸ್ಮರಿಸಲಾಯಿತು. ಆದರೆ ಎಲ್ಲಾ ಆಟಗಾರರನ್ನು ಕೊಂಡಾಡಿದ್ದರು, ಆದರೆ ನನ್ನ ಹೆಸರನ್ನು ಬಿಟ್ಟಿದ್ದರು. ಆ ಸಂದರ್ಭದಲ್ಲಿ ಸಚಿನ್ ನನ್ನ ಹೆಸರನ್ನು ಪ್ರತ್ಯೇಕವಾಗಿ ಹೇಳಿ ಗೆಲುವಿನಲ್ಲಿ ನನ್ನ ಪಾತ್ರ ದೊಡ್ಡದು ಎಂದಿದ್ದರು. ಆ ವೇಳೆ ನನಗೆ ಅಳುವೇ ಬಂದಿತ್ತು’ ಶ್ರೀಶಾಂತ್ ಬಹಿರಂಗಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.