Publish Date: Tue, 16 Oct 2018 (09:05 IST)
Updated Date: Tue, 16 Oct 2018 (09:07 IST)
ನವದೆಹಲಿ: ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಸರಣಿ ಗೆದ್ದ ಟೀಂ ಇಂಡಿಯಾಗೆ ಅಭಿನಂದಿಸುವ ಸಂದರ್ಭದಲ್ಲಿ ಎಡವಟ್ಟು ಮಾಡಿದ ಕಾಂಗ್ರೆಸ್ ಟ್ವಿಟರ್ ಖಾತೆಗೆ ಟ್ರೋಲ್ ಗೊಳಗಾಗಿದೆ.
ವಿಂಡೀಸ್ ವಿರುದ್ಧ ಸರಣಿ ಸ್ವೀಪ್ ಮಾಡಿದ ಟೀಂ ಇಂಡಿಯಾ ‘2-0 ಅಂತರದಿಂದ ಟೆಸ್ಟ್ ಸರಣಿ ಗೆದ್ದ ಮೆನ್ ಇನ್ ಬ್ಲೂ ತಂಡಕ್ಕೆ ಅಭಿನಂದನೆಗಳು’ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದ್ದರು.
ಟೀಂ ಇಂಡಿಯಾ ಆಟಗಾರರು ಬ್ಲೂ ಜೆರ್ಸಿ ತೊಡುವುದು ಸೀಮಿತ ಓವರ್ ಗಳ ಪಂದ್ಯಗಳಲ್ಲಿ ಮಾತ್ರ. ಆದರೆ ಟೆಸ್ಟ್ ತಂಡವನ್ನು ಮೆನ್ ಇನ್ ಬ್ಲೂ ಎಂದು ಹೇಳುವುದಿಲ್ಲ. ಆದರೆ ಕಾಂಗ್ರೆಸ್ ಈ ರೀತಿ ಹೇಳಿ ಟ್ರೋಲ್ ಗೊಳಗಾಗಿದೆ. ಕೆಲವರು ನೀವು ರಾಹುಲ್ ಗಾಂಧಿಯಾ ಎಂದು ಕೇಳಿದ್ದಾರೆ ಇನ್ನು ಕೆಲವರು ದಿವ್ಯ ಸ್ಪಂದನ (ನಟಿ ರಮ್ಯಾ) ಇದು ಟೆಸ್ಟ್ ಮ್ಯಾಚ್.. ಏಕದಿನ ಪಂದ್ಯವಲ್ಲ ಎಂದು ಕಾಂಗ್ರೆಸ್ ಸಾಮಾಜಿಕ ಜಾಲತಾಣ ಮುಖ್ಯಸ್ಥೆಯಾಗಿರುವ ರಮ್ಯಾಗೆ ಟಾಂಗ್ ಕೊಟ್ಟಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.