Publish Date: Tue, 16 Oct 2018 (09:12 IST)
Updated Date: Tue, 16 Oct 2018 (09:13 IST)
ಹೈದರಾಬಾದ್: ಇದುವರೆಗೆ ಆಡಿರುವ ಐದು ಟೆಸ್ಟ್ ಪಂದ್ಯಗಳ ಪೈಕಿ ಎರಡು ಬಾರಿ 90 ರ ಗಡಿಗೆ ತಲುಪಿದ್ದರೂ ಒಮ್ಮೆಯೂ ಶತಕ ಗಳಿಸಲು ಸಾಧ‍್ಯವಾಗದೇ ಇರುವುದಕ್ಕೆ ಟೀಂ ಇಂಡಿಯಾ ವಿಕೆಟ್ ಕೀಪರ್ ರಿಷಬ್ ಪಂತ್ ಬೇಸರದಲ್ಲಿದ್ದಾರೆ.
ಆದರೆ ಈ 90 ರ ಮೊತ್ತವನ್ನು ಮುಂದೊಂದು ದಿನ ಶತಕವಾಗಿ ಪರಿವರ್ತಿಸಿಯೇ ತೀರುತ್ತೇನೆ ಎಂದು ರಿಷಬ್ ಪಂತ್ ಶಪಥ ಮಾಡಿದ್ದಾರೆ.
ಇಂಗ್ಲೆಂಡ್ ವಿರುದ್ಧ ಪದಾರ್ಪಣೆ ಮಾಡಿದ್ದ ಟೆಸ್ಟ್ ಪಂದ್ಯದಲ್ಲಿ ರಿಷಬ್ 92 ರನ್ ಗಳಿಗೆ ಔಟಾಗಿದ್ದರು. ಮೊನ್ನೆ ವೆಸ್ಟ್ ಇಂಡೀಸ್ ವಿರುದ್ಧ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಮತ್ತೊಮ್ಮೆ ಇಷ್ಟೇ ಮೊತ್ತಕ್ಕೆ ಔಟಾಗುವ ಮೂಲಕ ನಿರಾಸೆ ಅನುಭವಿಸಿದ್ದರು. ಮುಂದೊಂದು ದಿನ ಇದನ್ನು ಶತಕವಾಗಿ ಪರಿವರ್ತಿಸುತ್ತೇನೆ. ಮತ್ತೆ ಮೊನ್ನೆ ಮಾಡಿದ ತಪ್ಪುಗಳನ್ನು ಮಾಡಲ್ಲ ಎಂದು ರಿಷಬ್ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.