ಆಂಡರ್ಸನ್ ತೆಂಡುಲ್ಕರ್ ಟ್ರೋಫಿಯಲ್ಲಿದೆ ಒಂದು ವಿಶೇಷತೆ ಏನದು ನೋಡಿ

Krishnaveni K
ಶುಕ್ರವಾರ, 20 ಜೂನ್ 2025 (09:52 IST)
Photo Credit: X
ಲೀಡ್ಸ್: ಭಾರತ ಮತ್ತು ಇಂಗ್ಲೆಂಡ್ ನಡುವೆ ಇಂದಿನಿಂದ ಆರಂಭವಾಗಲಿರುವ ಟೆಸ್ಟ್ ಸರಣಿಗೆ ತೆಂಡುಲ್ಕರ್ ಆಂಡರ್ಸನ್ ಟ್ರೋಫಿ ಎಂದು ಹೆಸರಿಡಲಾಗಿದೆ. ಈ ಟ್ರೋಫಿಯ ವಿಶೇಷತೆ ಏನು ಇಲ್ಲಿದೆ ವಿವರ.

ಭಾರತದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಮತ್ತು ಇಂಗ್ಲೆಂಡ್ ದಿಗ್ಗಜ ಬೌಲರ್ ಜೇಮ್ಸ್ ಆಂಡರ್ಸನ್ ಗೌರವಾರ್ಥ ಟ್ರೋಫಿಗೆ ಇವರಿಬ್ಬರ ಹೆಸರಿಡಲಾಗಿದೆ. ನಿನ್ನೆ ಈ ಇಬ್ಬರು ದಿಗ್ಗಜರೇ ಟ್ರೋಫಿ ಅನಾವರಣಗೊಳಿಸಿದರು. ಈ ಟ್ರೋಫಿಯಲ್ಲಿ ವಿಶೇಷತೆಯೊಂದಿದೆ.

ಕೇವಲ ಟ್ರೋಫಿಗೆ ಇವರ ಹೆಸರು ಮಾತ್ರವಲ್ಲ, ಇಬ್ಬರು ದಿಗ್ಗಜರ ಸಾಧನೆಗಳನ್ನು ಸೂಚಿಸುವ ಚಿಹ್ನೆಗಳು ಇದರಲ್ಲಿದೆ. ಟ್ರೋಫಿಯ ಮೇಲ್ಭಾಗದಲ್ಲಿ ಆಂಡರ್ಸನ್ ಮತ್ತು ಸಚಿನ್ ಹೆಸರಿನ ಮೊದಲ ಅಕ್ಷರವನ್ನು ಕೆತ್ತಲಾಗಿದೆ. ಬ್ಯಾಟ್ ಮತ್ತು ಬಾಲ್ ನ ಚಿಹ್ನೆ ಕೆತ್ತಲಾಗಿದೆ. ಮಧ್ಯದಲ್ಲಿ ಭಾರತ ಮತ್ತು ಇಂಗ್ಲೆಂಡ್ ಟೆಸ್ಟ್ ಸರಣಿ ಎಂದು ಬರೆಯಲಾಗಿದೆ.

ಟ್ರೋಫಿಯ ಕೆಳ ಭಾಗದಲ್ಲಿ ತೆಂಡುಲ್ಕರ್ ಬ್ಯಾಟಿಂಗ್ ಮಾಡುವ ಮತ್ತು ಆಂಡರ್ಸನ್ ಬೌಲಿಂಗ್ ಮಾಡುವ ಚಿತ್ರವನ್ನು ಕೆತ್ತಲಾಗಿದೆ. ಈ ಮೂಲಕ ಈ ಸರಣಿಗೆ ಇಬ್ಬರು ದಿಗ್ಗಜರ ಹೆಸರಿಟ್ಟಿದ್ದು ಮಾತ್ರವಲ್ಲ, ಟ್ರೋಫಿಯನ್ನು ವಿಶೇಷವಾಗಿ ವಿನ್ಯಾಸ ಮಾಡಿ ಗೌರವ ಸೂಚಿಸಲಾಗಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಏನೂ ಸಾಧಿಸದವರೆಲ್ಲಾ ಕೊಹ್ಲಿ, ರೋಹಿತ್ ಭವಿಷ್ಯ ನಿರ್ಧರಿಸುತ್ತಿದ್ದಾರೆ, ನನಗೂ ಹೀಗೇ ಆಗಿದೆ ಎಂದ ಹರ್ಭಜನ್

ದಕ್ಷಿಣ ಆಫ್ರಿಕಾ ವಿರುದ್ಧದ ಸೋಲಿಗೆ ಕಾರಣ ಬಿಚ್ಚಿಟ್ಟ ರಾಹುಲ್‌: ಬೌಲರ್‌ಗಳನ್ನು ಪ್ರಶಂಸಿಸಿದ ನಾಯಕ

ಮೈದಾನದಲ್ಲಿ ವಿರಾಟ್ ಕೊಹ್ಲಿ ಮಿಮಿಕ್ರಿ: ರೋಹಿತ್ ಶರ್ಮಾಗೆ ನಗುವೋ ನಗು video

ನಿನ್ ತಲೆ ಓಡಿಸ್ಬೇಡ, ಹೇಳಿದ್ದು ಹಾಕು: ಪ್ರಸಿದ್ಧ ಕೃಷ್ಣಗೆ ಕನ್ನಡದಲ್ಲೇ ಬೈದ ಕೆಎಲ್ ರಾಹುಲ್ Video

ಪ್ರಸಿದ್ಧ ಕೃಷ್ಣ ರನ್ ಮೆಷಿನ್: ಈತನನ್ನು ಹೇಗೆ ಪ್ರಮುಖ ಬೌಲರ್ ಅಂತ ಟೀಂನಲ್ಲಿ ಇಟ್ಕೊಂಡಿದ್ದಾರೆ

ಮುಂದಿನ ಸುದ್ದಿ
Show comments