IND vs ENG Test: ರೋಕೊ ಇಲ್ಲದ ಟೀಂ ಇಂಡಿಯಾಗೆ ರೂಟ್ ಕಿತ್ತೆಸೆಯುವುದೇ ದೊಡ್ಡ ಸವಾಲು

Krishnaveni K
ಶುಕ್ರವಾರ, 20 ಜೂನ್ 2025 (08:29 IST)
Photo Credit: X
ಲೀಡ್ಸ್: ಭಾರತ ಮತ್ತು ಇಂಗ್ಲೆಂಡ್ ನಡುವೆ ಇಂದಿನಿಂದ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಆರಂಭವಾಗಲಿದೆ. ರೋ-ಕೊ ಇಲ್ಲದ ಟೀಂ ಇಂಡಿಯಾಗೆ ಈಗ ‘ರೂಟ್’ ಕಿತ್ತೆಸೆಯುವುದೇ ದೊಡ್ಡ ಸವಾಲಾಗಲಿದೆ.
 

ಟೀಂ ಇಂಡಿಯಾ ದಿಗ್ಗಜರಾದ ವಿರಾಟ್ ಕೊಹ್ಲಿ-ರೋಹಿತ್ (ರೋ-ಕೊ) ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತಿಯಾದ ಮೇಲೆ ಟೀಂ ಇಂಡಿಯಾ ಆಡುತ್ತಿರುವ ಮೊದಲ ಟೆಸ್ಟ್ ಸರಣಿ ಇದಾಗಿದೆ. ಟೆಸ್ಟ್ ಫಾರ್ಮ್ಯಾಟ್ ನಲ್ಲಿ ಕೊಹ್ಲಿ ಇಲ್ಲದ ತಂಡವನ್ನು ಊಹಿಸಲೂ ಅಭಿಮಾನಿಗಳಿಗೆ ಸಾಧ್ಯವಾಗುತ್ತಿಲ್ಲ. ಅವರಿದ್ದರೆ ಮೈದಾನದಲ್ಲಿ ತಂಡದ ಉತ್ಸಾಹವೇ ಬೇರೆ ರೀತಿ ಇರುತ್ತಿತ್ತು.

ಈಗ ಶುಬ್ಮನ್ ಗಿಲ್ ನಾಯಕತ್ವದಲ್ಲಿ ಟೀಂ ಇಂಡಿಯಾ ಯುವ ಪಡೆ ಇಂಗ್ಲೆಂಡ್ ಎದುರಿಸಲಿದೆ. ಭಾರತ ತಂಡಕ್ಕೆ ಇಂಗ್ಲೆಂಡ್ ತಂಡದಲ್ಲಿ ಹೆಚ್ಚು ಕಾಡಬಹುದಾದ ಬ್ಯಾಟಿಗನೆಂದರೆ ಅನುಭವಿ ಜೋ ರೂಟ್. ಭಾರತದ  ವಿರುದ್ಧ ಪ್ರತೀ ಬಾರಿಯೂ ಜೋ ರೂಟ್ ಉತ್ತಮವಾಗಿಯೇ ಆಡಿದ್ದಾರೆ. ಜೊತೆಗೆ ಈಗ ಅವರು ಉತ್ತಮ ಫಾರ್ಮ್ ನಲ್ಲೂ ಇದ್ದಾರೆ. ಹೀಗಾಗಿ ರೂಟ್ ಕಿತ್ತೆಸೆಯದೇ ಟೀಂ ಇಂಡಿಯಾಕ್ಕೆ ಗೆಲ್ಲಲು ಕಷ್ಟ.

ಇಂಗ್ಲೆಂಡ್ ನ ಬಲಿಷ್ಠ ಬ್ಯಾಟಿಂಗ್ ನ ಹಳಿ ತಪ್ಪಿಸಲು ಜಸ್ಪ್ರೀತ್ ಬುಮ್ರಾ ಮೇಲೆಯೇ ಹೆಚ್ಚು ಅವಲಂಬಿತರಾಗಬೇಕಾಗುತ್ತದೆ. ಭಾರತದ ಬ್ಯಾಟಿಂಗ್ ವಿಚಾರಕ್ಕೆ ಬಂದರೆ ಕೊಹ್ಲಿ-ರೋಹಿತ್ ಇಲ್ಲದೇ ಹೋದರೂ ತಂಡದಲ್ಲಿ ಪ್ರತಿಭಾವಂತ ಬ್ಯಾಟಿಗರಿದ್ದಾರೆ. ಯಶಸ್ವಿ ಜೈಸ್ವಾಲ್, ಶುಬ್ಮನ್ ಗಿಲ್, ಕೆಎಲ್ ರಾಹುಲ್ ಈಗ ಅನುಭವಿಗಳೇ. ಆದರೆ ಗಿಲ್ ಇದುವರೆಗೆ ವಿದೇಶೀ ನೆಲದಲ್ಲಿ ಭರ್ಜರಿ ಇನಿಂಗ್ಸ್ ಆಡಿಲ್ಲ ಎಂಬ ಅಪವಾದವಿದೆ. ಅದನ್ನು ಅವರು ಇಲ್ಲಿ ತೊಡೆದು ಹಾಕಬೇಕಿದೆ. ಉಳಿದಂತೆ 8 ವರ್ಷಗಳ ಬಳಿಕ ಟೀಂ ಇಂಡಿಯಾಗೆ ಆಯ್ಕೆಯಾಗಿರುವ ಕರುಣ್ ನಾಯರ್ ಗೂ ಆಡುವ ಅವಕಾಶ ಸಿಗುವ ಸಾಧ್ಯತೆಯಿದೆ. ಐಪಿಎಲ್ ಅಲ್ಲದೆ ದೇಶೀಯ ಕ್ರಿಕೆಟ್ ನಲ್ಲೂ ಅವರು ಮಿಂಚಿದ್ದರು.

ಇನ್ನು, ಆಸ್ಟ್ರೇಲಿಯಾ ಸರಣಿಯಲ್ಲಿ ಮಿಂಚಿದ್ದ ನಿತೀಶ್ ಕುಮಾರ್ ರೆಡ್ಡಿ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಗಿಳಿಯಬಹುದು. ಬೌಲಿಂಗ್ ನಲ್ಲಿ ಟೀಂ ಇಂಡಿಯಾ ಬುಮ್ರಾ ಜೊತೆಗೆ ಪ್ರಸಿದ್ಧ ಕೃಷ್ಣ, ಮೊಹಮ್ಮದ್ ಸಿರಾಜ್, ಶ್ರಾದ್ಧೂಲ್ ಠಾಕೂರ್ ರನ್ನು ಕಣಕ್ಕಿಳಿಸಬಹುದು. ನಾಲ್ವರು ವೇಗಿಗಳನ್ನು ಕಣಕ್ಕಿಳಿಸಿದರೆ ರವೀಂದ್ರ ಜಡೇಜಾ ಏಕ ಮಾತ್ರ ಸ್ಪಿನ್ನರ್ ಆಗಿರಲಿದ್ದಾರೆ. ಕುಲದೀಪ್ ಯಾದವ್ ಬೆಂಚ್ ಕಾಯಿಸಬೇಕಾಗಬಹುದು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಜನವರಿಯಲ್ಲೇ ನಡೆಯಲಿದೆ ಡಬ್ಲ್ಯುಪಿಎಲ್‌ ಟೂರ್ನಿ: ಆರ್‌ಸಿಬಿ ಅಭಿಮಾನಿಗಳಿಗೆ ಬಿಗ್‌ ಶಾಕ್‌

ಕಾಂತಾರ ಸಕ್ಸಸ್ ಬೆನ್ನಲ್ಲೇ ಕ್ರಿಕೆಟ್‌ನತ್ತ ಮುಖಮಾಡಿದ ಹೊಂಬಾಳೆ, ಏನಿದು ಬೆಳವಣಿಗೆ

ಇಂಥಾ ಪಿಚ್ ನಲ್ಲಿ ಸಚಿನ್, ಕೊಹ್ಲಿಗೂ ಆಡಕ್ಕೆ ಆಗ್ತಿರಲಿಲ್ಲ: ಹರ್ಭಜನ್ ಸಿಂಗ್ ವಾಗ್ದಾಳಿ

ಐಪಿಎಲ್ ನಲ್ಲಿ ಮಾಲಿಕರು ಏನೇನೋ ಪ್ರಶ್ನೆ ಕೇಳ್ತಾರೆ: ಕೆಎಲ್ ರಾಹುಲ್ ಬಿಚ್ಚಿಟ್ಟ ಸತ್ಯ

ಟೀಂ ಇಂಡಿಯಾ ಟೆಸ್ಟ್ ತಂಡ ಹಳ್ಳ ಹಿಡಿಸಿದ ಗೌತಮ್ ಗಂಭೀರ್ ಟೆಸ್ಟ್ ದಾಖಲೆ ಹೇಗಿತ್ತು ನೋಡಿ

ಮುಂದಿನ ಸುದ್ದಿ
Show comments