Publish Date: Sat, 07 Feb 2026 (17:06 IST)
Updated Date: Sat, 07 Feb 2026 (17:09 IST)
ಮುಂಬೈ: ಪಾಲಾಶ್ ಮುಚ್ಚಲ್ ರನ್ನು ರೋಸ್ಟ್ ಮಾಡಿ ಪೋಸ್ಟ್ ಒಂದನ್ನು ಮಾಡಿದ್ದ ಆರ್ ಸಿಬಿ ನಾಯಕಿ ಸ್ಮೃತಿ ಮಂಧಾನ ತಾಯಿ ವಿವಾದವಾಗುತ್ತಿದ್ದಂತೇ ಅದನ್ನು ಡಿಲೀಟ್ ಮಾಡಿದ್ದಾರೆ.
ಪಾಲಾಶ್ ಮುಚ್ಚಲ್ ಜೊತೆಗೆ ಆರು ವರ್ಷ ಡೇಟಿಂಗ್ ಮಾಡುತ್ತಿದ್ದ ಸ್ಮೃತಿ ನವಂಬರ್ ನಲ್ಲಿ ಮದುವೆಯಾಗಬೇಕಿತ್ತು. ಆದರೆ ಮದುವೆ ದಿನವೇ ಮದುವೆ ಮುರಿದುಬಿತ್ತು. ಅದಕ್ಕೆ ಕಾರಣಗಳ ಬಗ್ಗೆ ಹಲವು ರೂಮರ್ ಗಳು ಹರಿದಾಡುತ್ತಿವೆ.
ವೈಯಕ್ತಿಕ ಜೀವನದಲ್ಲಿ ಸಾಕಷ್ಟು ನೋವು ಕಂಡಿರುವ ಸ್ಮೃತಿ ಕ್ರಿಕೆಟ್ ಮೂಲಕ ಅದನ್ನು ಮರೆಯುತ್ತಿದ್ದಾರೆ. ಇದೀಗ ಡಬ್ಲ್ಯುಪಿಎಲ್ ನಲ್ಲಿ ಗರಿಷ್ಠ ರನ್ ಗಳಿಸಿ ಆರೆಂಜ್ ಕ್ಯಾಪ್ ಗಳಿಸಿದ್ದಲ್ಲದೆ, ಆರ್ ಸಿಬಿ ಚಾಂಪಿಯನ್ ಆಗುವಂತೆ ಮಾಡಿದ್ದಾರೆ.
ಆರ್ ಸಿಬಿ ಫೈನಲ್ ಗೆದ್ದ ಬೆನ್ನಲ್ಲೇ ಸ್ಮೃತಿ ತಾಯಿ ಸ್ಮಿತಾ ಮಂಧಾನ ಇನ್ ಸ್ಟಾಗ್ರಾಂನಲ್ಲಿ ಪಾಲಾಶ್ ಮುಚ್ಚಲ್ ರನ್ನು ಟೀಕಿಸಿ ಮಾಡಿದ್ದ ಪೋಸ್ಟ್ ಒಂದನ್ನು ರಿಪೋಸ್ಟ್ ಮಾಡಿದ್ದು ಎಲ್ಲರ ಗಮನ ಸೆಳೆದಿದೆ. ಸ್ಮೃತಿಗೆ ಡೆಲ್ಲಿ ಬೌಲರ್ ಗಳು ಪಾಲಾಶ್ ರಂತೆ ಕಂಡಿರಬೇಕು. ಅದಕ್ಕೇ ಹಿಗ್ಗಾಮುಗ್ಗಾ ಭಾರಿಸಿದ್ದಾರೆ ಎಂಬ ಮೆಮೆಯೊಂದನ್ನು ಸ್ಮಿತಾ ರಿ ಪೋಸ್ಟ್ ಮಾಡಿದ್ದರು. ಆದರೆ ಇದು ವೈರಲ್ ಆಗುತ್ತಿದ್ದಂತೇ ಡಿಲೀಟ್ ಮಾಡಿದ್ದಾರೆ.