Select Your Language

Notifications

webdunia
webdunia
webdunia
webdunia

ಮಹಿಳಾ ಕ್ರಿಕೆಟ್: ವಿಶ್ವದಾಖಲೆ ಮಾಡಿದ ಭಾರತದ ಸ್ಮೃತಿ ಮಂಥನಾ

ಮಹಿಳಾ ಕ್ರಿಕೆಟ್: ವಿಶ್ವದಾಖಲೆ ಮಾಡಿದ ಭಾರತದ ಸ್ಮೃತಿ ಮಂಥನಾ
ಲಕ್ನೋ , ಬುಧವಾರ, 10 ಮಾರ್ಚ್ 2021 (10:01 IST)
ಲಕ್ನೋ: ದ.ಆಫ್ರಿಕಾ ವಿರುದ್ಧದ ಮಹಿಳಾ ಏಕದಿನ ಪಂದ್ಯದಲ್ಲಿ ಭಾರತದ ಸ್ಮೃತಿ ಮಂಥನಾ ವಿಶ್ವ ದಾಖಲೆಯೊಂದನ್ನು ಮಾಡಿದ್ದಾರೆ. ಈ ಪಂದ್ಯವನ್ನು ಭಾರತ 9 ವಿಕೆಟ್ ಗಳಿಂದ ಭರ್ಜರಿಯಾಗಿ ಗೆದ್ದುಕೊಂಡ ಮಹಿಳೆಯರು ಸರಣಿ ಸಮಬಲಗೊಳಿಸಿದ್ದಾರೆ.


ಭಾರತದ ಆರಂಭಿಕ ಆಟಗಾರ್ತಿ ಸ್ಮೃತಿ ಮಂಥನಾ 64 ಎಸೆತಗಳಲ್ಲಿ ಔಟಾಗದೇ 80 ರನ್ ಗಳಿಸಿದರು. ಇದು ಅವರು ಏಕದಿನ ಪಂದ್ಯಗಳಲ್ಲಿ ಸತತವಾಗಿ ಸಿಡಿಸಿ 10 ನೇ ಅರ್ಧಶತಕವಾಗಿತ್ತು. ಈ ಮೂಲಕ ವಿಶ್ವ ದಾಖಲೆ ಮಾಡಿದ್ದಾರೆ.

ಈ ಮೊದಲು ನ್ಯೂಜಿಲೆಂಡ್ ನ ಸುಜೀ ಬೇಟ್ಸ್ ಸತತ 9 ಅರ್ಧಶತಕ ಗಳಿಸಿ ದಾಖಲೆ ಮಾಡಿದ್ದರು. ಮೊದಲು ಬ್ಯಾಟಿಂಗ್ ಮಾಡಿದ್ದ ದ.ಆಫ್ರಿಕಾ 41 ಓವರ್ ಗಳಲ್ಲಿ 157 ರನ್ ಗಳಿಗೆ ಆಲೌಟ್ ಆಗಿತ್ತು.  ಈ ಮೊತ್ತವನ್ನು 28.4 ಓವರ್ ಗಳಲ್ಲಿ ಬೆನ್ನತ್ತಿದ ಭಾರತ 1 ವಿಕೆಟ್ ಕಳೆದುಕೊಂಡು 160 ರನ್ ಗಳಿಸುವ ಮೂಲಕ ಗುರಿ ಮುಟ್ಟಿತು.

Share this Story:

Follow Webdunia kannada

ಮುಂದಿನ ಸುದ್ದಿ

ಐಸಿಸಿ ಮಾಸಿಕ ಆಟಗಾರ ಪ್ರಶಸ್ತಿ ಗೆದ್ದ ರವಿಚಂದ್ರನ್ ಅಶ್ವಿನ್