Publish Date: Mon, 13 Mar 2023 (10:50 IST)
Updated Date: Mon, 13 Mar 2023 (10:52 IST)
ಮುಂಬೈ: ಟೀಂ ಇಂಡಿಯಾ ಬ್ಯಾಟಿಗ ಶ್ರೇಯಸ್ ಅಯ್ಯರ್ ಬೆನ್ನು ನೋವಿಗೊಳಗಾಗಿದ್ದು, ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಬ್ಯಾಟಿಂಗ್ ಗಿಳಿದಿರಲಿಲ್ಲ.
ಅವರ ಬೆನ್ನು ನೋವು ಗಂಭೀರವಾಗಿದ್ದು, ಸ್ಕ್ಯಾನಿಂಗ್ ಗೆ ಕಳುಹಿಸಲಾಗಿದೆ. ಅವರ ಸ್ಕ್ಯಾನಿಂಗ್ ವರದಿ ಬಂದ ಮೇಲಷ್ಟೇ ಅವರು ಯಾವಾಗ ತಂಡಕ್ಕೆ ಮರಳುತ್ತಾರೆ ಎಂಬುದು ಸ್ಪಷ್ಟವಾಗಲಿದೆ.
ಇತ್ತೀಚೆಗಷ್ಟೇ ಶ್ರೇಯಸ್ ಬೆನ್ನು ನೋವಿನಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿದ್ದರು. ಆದರೆ ಈಗ ಮತ್ತೆ ಬೆನ್ನು ನೋವಿಗೊಳಗಾಗಿರುವುದರಿಂದ ಅವರ ಗಾಯ ಗಂಭೀರವಾಗಿದೆ ಎನ್ನಲಾಗಿದೆ. ಹೀಗಾಗಿ ಏಕದಿನ ಸರಣಿಯಿಂದಲೂ ಅವರು ಹೊರಗುಳಿಯುವುದು ಖಚಿತವಾಗಿದೆ.