ನವದೆಹಲಿ: ಟೀಂ ಇಂಡಿಯಾ ಕ್ರಿಕೆಟಿಗ ಶಿಖರ್ ಧವನ್ ಮಹಾಶಿವರಾತ್ರಿ ನಿಮಿತ್ತ ತಮ್ಮ ಮನೆಯಲ್ಲಿ ಪೂಜೆ ಮಾಡುತ್ತಿರುವ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದರು.
ಆದರೆ ಈ ಕಾರಣಕ್ಕೆ ಧವನ್ ಈಗ ಟ್ರೋಲ್ ಆಗಿದ್ದಾರೆ. ಹೆಚ್ಚಾಗಿ ಕ್ರಿಕೆಟ್ ನಿಮಿತ್ತ ಮನೆಯಿಂದ ಹೊರಗೇ ಇರುವ ಧವನ್ ಗೆ ಈ ಬಾರಿ ಶಿವರಾತ್ರಿ ಪೂಜೆಯನ್ನು ಮನೆಯಲ್ಲಿಯೇ ಆಚರಿಸುವ ಸಂಭ್ರಮ. ಹೀಗಾಗಿ ಭಕ್ತಿಯಿಂದ ಗಂಟೆ ಬಾರಿಸುತ್ತಾ ಆರತಿ ಎತ್ತಿ ಪೂಜೆ ಮಾಡುವ ವಿಡಿಯೋ ಪ್ರಕಟಿಸಿ ಶಿವರಾತ್ರಿ ಪೂಜೆ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದರು.
ಆದರೆ ಧವನ್ ದುರ್ಗಾ ದೇವಿಯ ಮೂರ್ತಿಗೆ ಪೂಜೆ ಮಾಡಿದ್ದಾರೆ. ಇದೇ ಕಾರಣಕ್ಕೆ ವ್ಯಕ್ತಿಯೊಬ್ಬರು ಶಿವರಾತ್ರಿ ಎಂದು ದುರ್ಗೆಗೆ ಪೂಜೆ ಮಾಡುತ್ತಿದ್ದೀರಲ್ಲಾ ಎಂದು ಕಾಲೆಳೆದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಧವನ್, ಮನೆಯ ಮಂದಿರದಲ್ಲಿ ಎಲ್ಲಾ ದೇವರ ಮೂರ್ತಿ ಪ್ರತಿಷ್ಠಾಪಿಸಲು ಸಾಧ್ಯವಿಲ್ಲವಲ್ಲಾ ಅದಕ್ಕೆ ಹೀಗೆ ಎಂದು ಉತ್ತರಿಸಿದ್ದಾರೆ.