Select Your Language

Notifications

webdunia
webdunia
webdunia
webdunia

ಕಿಂಗ್ ಕೊಹ್ಲಿ ಐತಿಹಾಸಿಕ ಟೆಸ್ಟ್ ಗೆ ನಮಗ್ಯಾಕೆ ಎಂಟ್ರಿ ಇಲ್ಲ? ಫ್ಯಾನ್ಸ್ ಆಕ್ರೋಶ

ಕಿಂಗ್ ಕೊಹ್ಲಿ ಐತಿಹಾಸಿಕ ಟೆಸ್ಟ್ ಗೆ ನಮಗ್ಯಾಕೆ ಎಂಟ್ರಿ ಇಲ್ಲ? ಫ್ಯಾನ್ಸ್ ಆಕ್ರೋಶ
ಮುಂಬೈ , ಸೋಮವಾರ, 28 ಫೆಬ್ರವರಿ 2022 (08:40 IST)
ಮುಂಬೈ: ಶ್ರೀಲಂಕಾ ವಿರುದ್ಧ ಮಾರ್ಚ್ 4 ರಿಂದ ಮೊಹಾಲಿಯಲ್ಲಿ ನಡೆಯಲಿರುವ ಟೆಸ್ಟ್ ಪಂದ್ಯ ವಿರಾಟ್ ಕೊಹ್ಲಿ ಪಾಲಿಗೆ 100 ನೇ ಟೆಸ್ಟ್ ಪಂದ್ಯ. ಈ ಐತಿಹಾಸಿಕ ಟೆಸ್ಟ್ ಪಂದ್ಯ ಪ್ರೇಕ್ಷಕರಿಲ್ಲದೇ ಆಯೋಜಿಸಲು ಬಿಸಿಸಿಐ ನಿರ್ಧರಿಸಿದೆ. ಈ ನಿರ್ಧಾರಕ್ಕೆ ಫ್ಯಾನ್ಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊಹ್ಲಿಯ ಮೈಲಿಗಲ್ಲಿನ ಪಂದ್ಯ ವೀಕ್ಷಿಸುವುದು ಅವರ ಅಭಿಮಾನಿಗಳ ಕನಸಾಗಿತ್ತು. ಈ ಮೊದಲು ಈ ಪಂದ್ಯ ಬೆಂಗಳೂರಿನಲ್ಲಿ ನಡೆಯಲಿದೆ ಎಂದೇಊಹಿಸಲಾಗಿತ್ತು. ಆದರೆ ಕೊನೆಯಲ್ಲಿ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ ಮೊದಲ ಪಂದ್ಯವನ್ನು ಮೊಹಾಲಿಯಲ್ಲಿ ನಡೆಸುವುದಾಗಿ ಪ್ರಕಟಿಸಿತ್ತು. ಒಂದು ಬೆಂಗಳೂರಿನಲ್ಲಿ ಮೊದಲ ಪಂದ್ಯ ಆಯೋಜಿಸಿದ್ದರೆ ಕೊಹ್ಲಿಗೆ 100 ನೇ ಪಂದ್ಯವನ್ನು ಅಭಿಮಾನಿಗಳ ಸಮ್ಮುಖದಲ್ಲೇ ಆಡಬಹುದಿತ್ತು.

ಆದರೆ ಇಷ್ಟು ದಿನ ನಮ್ಮನ್ನು ರಂಜಿಸಿದ ಈ ಕ್ರಿಕೆಟಿಗನಿಗೆ 100 ನೇ ಪಂದ್ಯದಲ್ಲಿ ಚಿಯರ್ ಮಾಡಲು ಪ್ರೇಕ್ಷಕರಿಗೇ ಅವಕಾಶ ಕೊಡದೇ ಇರುವುದು ಸರಿಯಲ್ಲ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಆಕ್ರೋಶ ಹೊರಹಾಕಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ಶ್ರೀಲಂಕಾ ಟಿ20: ಟೀಂ ಇಂಡಿಯಾಕ್ಕೆ ದಾಖಲೆಯ ಗೆಲುವು