Select Your Language

Notifications

webdunia
webdunia
webdunia
Sunday, 6 April 2025
webdunia

ಮಗಳ ಜೊತೆ ತಂದೆಯನ್ನೂ ಕಳೆದುಕೊಂಡ ರಣಜಿ ಕ್ರಿಕೆಟಿಗರ ವಿಷ್ಣು ಸೋಲಂಕಿ

ವಿಷ್ಣು ಸೋಲಂಕಿ
ಬರೋಡ , ಸೋಮವಾರ, 28 ಫೆಬ್ರವರಿ 2022 (16:49 IST)
ಬರೋಡ: ಬರೋಡ ತಂಡದ ಪರ ರಣಜಿ ಕ್ರಿಕೆಟ್ ಆಡುವ ವಿಷ್ಣು ಸೋಲಂಕಿಗೆ ವೈಯಕ್ತಿಕ ಜೀವನದಲ್ಲಿ ಆಘಾತದ ಮೇಲೆ ಆಘಾತ. ಮೊನ್ನೆಯಷ್ಟೇ ನವಜಾತ ಮಗಳನ್ನು ಕಳೆದುಕೊಂಡಿದ್ದ ವಿಷ್ಣು ಸೋಲಂಕಿ ಈಗ ಎರಡೇ ವಾರದ ಅಂತರದಲ್ಲಿ ತಂದೆಯನ್ನು ಕಳೆದುಕೊಂಡ ದುಃಖದಲ್ಲಿದ್ದಾರೆ.

ಫೆಬ್ರವರಿ 10 ರಂದು ವಿಷ್ಣು ಸೋಲಂಕಿಗೆ ಮಗಳ ಜನನವಾಗಿತ್ತು. ಆದರೆ ಮರುದಿನವೇ ಮಗಳು ಸಾವನ್ನಪ್ಪಿದ್ದಳು. ಆಗ ವಿಷ್ಣು ರಣಜಿ ಪಂದ್ಯಕ್ಕೆ ಅಣಿಯಾಗುತ್ತಿದ್ದರು. ಮಗಳನ್ನು ಮೊದಲ ಬಾರಿಗೆ ಎತ್ತಿಕೊಳ್ಳಬೇಕಿದ್ದ ವಿಷ್ಣು ಆಕೆಯ ಅಂತ್ಯ ಸಂಸ್ಕಾರ ಮುಗಿಸಿ ತಂಡಕ್ಕೆ ಮರಳಿ ಶತಕದ ಇನಿಂಗ್ಸ್ ಆಡಿದ್ದರು.

ಈ ದುಃಖ ಮರೆಯುವ ಮೊದಲೇ ಈಗ ವಿಷ್ಣುಗೆ ಮತ್ತೊಂದು ಆಘಾತ ಎದುರಾಗಿದೆ. ಅನಾರೋಗ್ಯ ಪೀಡಿತರಾಗಿ ಆಸ್ಪತ್ರೆಗೆ ದಾಖಲಾಗಿದ್ದ ವಿಷ್ಣು ತಂದೆ ಇದೀಗ ನಿಧನರಾಗಿದ್ದಾರೆ. ಈ ಬಾರಿ ಅವರು ರಣಜಿ ಪಂದ್ಯವಾಡುತ್ತಿದ್ದರಿಂದ ಮಧ್ಯದಲ್ಲೇ ಪಂದ್ಯ ಬಿಟ್ಟು ಹೋಗಲಾಗದೇ ವಿಡಿಯೋ ಕಾಲ್ ಮೂಲಕವೇ ಅಂತ್ಯಕ್ರಿಯೆ ವೀಕ್ಷಿಸಬೇಕಾಯಿತು. ವೈಯಕ್ತಿಕ ಜೀವನದಲ್ಲಿ ಇಷ್ಟೊಂದು ದುಃಖವಿದ್ದರೂ ಕರ್ತವ್ಯ ಮರೆಯದ ಕ್ರಿಕೆಟಿಗನಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಆಕ್ಸಿಡೆಂಟ್ ಕೇಸ್ ನಲ್ಲಿ ವಿನೋದ್ ಕಾಂಬ್ಳಿ ಅರೆಸ್ಟ್