Publish Date: Fri, 06 Apr 2018 (08:49 IST)
Updated Date: Fri, 06 Apr 2018 (09:00 IST)
ನವದೆಹಲಿ: ಟೀಂ ಇಂಡಿಯಾ ಕ್ರಿಕೆಟಿಗ ಶಿಖರ್ ಧವನ್ ತಮ್ಮ ಟ್ವಿಟರ್ ಪೇಜ್ ನಲ್ಲಿ ಭಾವುಕರಾಗಿ ನಿನ್ನನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಸಂದೇಶ ಬರೆದಿದ್ದಾರೆ.
ಆದರೆ ಇದು ಪತ್ನಿ, ಮಕ್ಕಳ ಬಗ್ಗೆಯಂತೂ ಅಲ್ಲ. ಬದಲಾಗಿ ತಮ್ಮ ನೆಚ್ಚಿನ ನಾಯಿ ಬಗ್ಗೆ. ಟೆರಿಯನ್ನು ನಾನು ನಿನ್ನೆ ಕಳೆದುಕೊಂಡೆ. ನಿನ್ನ ನಾವು ತುಂಬಾ ಮಿಸ್ ಮಾಡಿಕೊಳ್ಳುತ್ತೇವೆ. ನಮ್ಮ ಹಲವು ಸುಖ ದುಃಖಗಳಲ್ಲಿ ನಮ್ಮ ಜತೆಗೆ ಸಂತೋಷ ಕೊಡುತ್ತಲಿದ್ದೆ. ಅದನ್ನು ಜೀವನದುದ್ದಕ್ಕೂ ನೆನಪಿಸಿಕೊಳ್ಳುವೆ. ಆಕೆಯ ಸ್ಥಾನ ಯಾರೂ ತುಂಬಲು ಸಾಧ್ಯವಿಲ್ಲ ಎಂದು ಧವನ್ ತಮ್ಮ ಮುದ್ದಿನ ನಾಯಿ ಬಗ್ಗೆ ಬರೆದುಕೊಂಡಿದ್ದಾರೆ.
ಜತೆಗೆ ಮುದ್ದಿನ ನಾಯಿಯ ಜತೆಗಿನ ಸುಂದರ ಕ್ಷಣಗಳ ಫೋಟೋವನ್ನೂ ಹಾಕಿದ್ದಾರೆ. ಭಾರತೀಯ ಕ್ರಿಕೆಟಿಗರ ನಾಯಿ ಪ್ರೀತಿ ಎಲ್ಲರಿಗೂ ಗೊತ್ತಿರುವ ವಿಚಾರವೇ. ಆದರೆ ಶಿಖರ್ ಇನ್ನೂ ಒಂದು ಕೈ ಜಾಸ್ತಿ ಎನ್ನುವಷ್ಟು ಪ್ರೀತಿಯಿಂದ ಬರೆದುಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.