Select Your Language

Notifications

webdunia
webdunia
webdunia
webdunia

ತಂದೆಗೆ ತಕ್ಕ ಮಗ! ಕರ್ನಾಟಕ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಅರ್ಧಶತಕ ಸಿಡಿಸಿದ ಸೆಹ್ವಾಗ್ ಪುತ್ರ

ತಂದೆಗೆ ತಕ್ಕ ಮಗ! ಕರ್ನಾಟಕ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಅರ್ಧಶತಕ ಸಿಡಿಸಿದ ಸೆಹ್ವಾಗ್ ಪುತ್ರ
ನವದೆಹಲಿ , ಬುಧವಾರ, 13 ಡಿಸೆಂಬರ್ 2023 (10:21 IST)
Photo Courtesy: Twitter
ನವದೆಹಲಿ: ಒಂದು ಕಾಲದಲ್ಲಿ ಟೀಂ ಇಂಡಿಯಾದಲ್ಲಿ ಹೊಡೆಬಡಿಯ ಆಟದ ಮೂಲಕ ಸಿಡಿಲಮರಿ ಎಂದೇ ಕರೆಯಿಸಿಕೊಳ್ಳುತ್ತಿದ್ದ ವೀರೇಂದ್ರ ಸೆಹ್ವಾಗ್ ಯಾರಿಗೆ ನೆನಪಿಲ್ಲ ಹೇಳಿ? ಅವರ ಪುತ್ರ ಆರ್ಯವೀರ್ ಈಗ ತಂದೆಯದ್ದೇ ಹಾದಿಯಲ್ಲಿದ್ದಾನೆ.

ವಿಜಯ್ ಮರ್ಚೆಂಟ್ ಟ್ರೋಫಿ ಅಂಡರ್ 16 ಟೂರ್ನಿಯಲ್ಲಿ ಕರ್ನಾಟಕದ ವಿರುದ್ಧದ ಪಂದ್ಯದಲ್ಲಿ ದೆಹಲಿ ಪರ ಆಡಿದ ಸೆಹ್ವಾಗ್ ಪುತ್ರ ಆರ್ಯವೀರ್ ಮೊದಲ ದಿನವೇ ಅಜೇಯ 54 ರನ್ ಗಳಿಸಿ ಮಿಂಚಿದರು. ಅವರ ಇನಿಂಗ್ಸ್ ನಲ್ಲಿ 8 ಬೌಂಡರಿ, ಒಂದು ಸಿಕ್ಸರ್ ಕೂಡಾ ಸೇರಿತ್ತು. ತಂದೆಯಂತೇ ಸಿಡಿಲಬ್ಬರದ ಇನಿಂಗ್ಸ್ ಆಡಿ ಗಮನ ಸೆಳೆದರು.

ಮೂರು ದಿನಗಳ ಟೂರ್ನಿ ಇದಾಗಿದ್ದು, ಕರ್ನಾಟಕ ತಂಡಕ್ಕೆ ರಾಹುಲ್ ದ್ರಾವಿಡ್ ಪುತ್ರ ಅನ್ವಯ್ ನಾಯಕತ್ವವಿದೆ. ಒಂದೆಡೆ ಸೆಹ್ವಾಗ್ ಪುತ್ರ ಮಿಂಚಿದರೆ ಇತ್ತ ಕರ್ನಾಟಕದ ಪರ ಆಡುತ್ತಿರುವ ದ್ರಾವಿಡ್ ಪುತ್ರ ಶೂನ್ಯಕ್ಕೆ ನಿರ್ಗಮಿಸಿ ನಿರಾಸೆ ಮೂಡಿಸಿದರು. ಆದರೆ ಎರಡನೇ ಇನಿಂಗ್ಸ್ ನಲ್ಲಿ ಅವರು ಆಡುವ ನಿರೀಕ್ಷೆಯಿದೆ.

ಒಂದು ಕಾಲದಲ್ಲಿ ಟೀಂ ಇಂಡಿಯಾದ ಬಲಾಢ್ಯ ಬ್ಯಾಟಿಗರಾಗಿದ್ದ ದ್ರಾವಿಡ್-ಸೆಹ್ವಾಗ್ ಪುತ್ರರು ಈಗ ದೇಶೀಯ ಕ್ರಿಕೆಟ್ ನಲ್ಲಿ ಮಿಂಚುತ್ತಿರುವುದು ವಿಶೇಷ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ಆಫ್ರಿಕಾ ಟಿ20: ಮೈದಾನದಲ್ಲಿ ಗಾಜುಗಳನ್ನು ಪುಡಿಗಟ್ಟಿದ ರಿಂಕು ಸಿಂಗ್