Publish Date: Thu, 05 Feb 2026 (11:06 IST)
Updated Date: Thu, 05 Feb 2026 (11:09 IST)
ಮುಂಬೈ: ಅಭ್ಯಾಸ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ರನ್ನು ಹೊರಗಿಟ್ಟು ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ದೊಡ್ಡ ಮೆಸೇಜ್ ಕೊಟ್ಟಿದೆ.
ಟಿ20 ವಿಶ್ವಕಪ್ ಗೆ ಪೂರ್ವಭಾವಿಯಾಗಿ ನಿನ್ನೆ ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ಮುಂಬೈನಲ್ಲಿ ಅಭ್ಯಾಸ ಪಂದ್ಯವಾಡಿದೆ. ಈ ಪಂದ್ಯವನ್ನು ಟೀಂ ಇಂಡಿಯಾ 30 ರನ್ ಗಳಿಂದ ಗೆದ್ದುಕೊಂಡಿದೆ. ಮೊದಲು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ 240 ರನ್ ಗಳಿಸಿದ್ದರೆ ಆಫ್ರಿಕಾ 210 ರನ್ ಗಳಿಸಲಷ್ಟೇ ಶಕ್ತವಾಯಿತು.
ಈ ಪಂದ್ಯದಿಂದ ಕಳಪೆ ಫಾರ್ಮ್ ನಲ್ಲಿರುವ ಸಂಜು ಸ್ಯಾಮ್ಸನ್ ರನ್ನು ಹೊರಗಿಡುವ ಮೂಲಕ ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ದೊಡ್ಡ ಸಂದೇಶ ರವಾನಿಸಿದೆ. ಸಂಜು ಬದಲು ಇಶಾನ್ ಕಿಶನ್ ರನ್ನು ಆರಂಭಿಕರಾಗಿ ಕಣಕ್ಕಿಳಿಸಿದೆ. ಇಶಾನ್ ಅರ್ಧಶತಕ ಸಿಡಿಸಿ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಹೀಗಾಗಿ ಈ ಟಿ20 ವಿಶ್ವಕಪ್ ನಲ್ಲಿ ಸಂಜು ಸ್ಯಾಮ್ಸನ್ ಗೆ ಆಡುವ ಅವಕಾಶ ಸಿಗುವುದೇ ಅನುಮಾನವಾಗಿದೆ. ಕಳೆದ ಬಾರಿಯೂ ಟಿ20 ವಿಶ್ವಕಪ್ ನಲ್ಲಿ ಅವರು ತಂಡದಲ್ಲಿದ್ದರೂ ಆಡುವ ಬಳಗದಲ್ಲಿ ಅವಕಾಶ ಪಡೆದಿರಲಿಲ್ಲ. ಈ ಬಾರಿ ಅವರಿಗೆ ಓಪನರ್ ಆಗಿ ಆಡುವ ಎಲ್ಲಾ ಅವಕಾಶವಿತ್ತು. ಆದರೆ ಸಾಕಷ್ಟು ಅವಕಾಶ ನೀಡಿಯೂ ಅವರು ರನ್ ಗಳಿಸಲು ವಿಫಲರಾಗಿದ್ದಾರೆ. ಹೀಗಾಗಿ ಸ್ಥಾನ ಕಳೆದುಕೊಂಡಿದ್ದಾರೆ.